ಕ್ಲಬ್ ಹೌಸ್ ನಲ್ಲಿ ನಾಳೆ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

images (6)
Published on

ಕಾಸರಗೋಡು: ವಿಕಾಸ ಟ್ರಸ್ಟ್ ಸಹಯೋಗದೊಂದಿಗೆ ನಮ್ಮ ಕಾಸ್ರೋಡು ಕ್ಲಬ್ ಆಯೋಜಿಸುವ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಜು.26 ರಂದು ಸಂಜೆ 7 ರಿಂದ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲೆಯ ನಿವೃತ್ತ ಸೈನಿಕರಾದ ಲೆ ಕ ಅಶೋಕ್ ಕಿಣಿ ಮತ್ತು ಕಮಾಂಡೋ ಶ್ಯಾಮರಾಜ್ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ರಂಗದ ಹಲವು ಗಣ್ಯರು, ಯುವ ಸಾಧಕರು ಭಾಗವಹಿಸಲಿದ್ದಾರೆ.

ಕ್ಲಬ್ ಹೌಸ್ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣವಾಗಿದ್ದು, ಈ ಆಪ್ ನ್ನು ಮೊದಲೇ ಡೌನ್ಲೋಡ್ ಮಾಡಿಕೊಂಡು ಈ ಲಿಂಕ್ https://www.clubhouse.com/event/Mww486gB ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net