

ರಾಯಚೂರು: ಮಣಿಪುರದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ದೌರ್ಜನ್ಯ ಖಂಡಿಸಿ ಕ್ರೈಸ್ತ ಸಮುದಾಯದಿಂದ ನಗರದ ರೈಲು ನಿಲ್ದಾಣದ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಕಾರಿ ಕಚೇರಿಗೆ ಆಗಮಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮನವಿ ಸಲ್ಲಿಸಿ, ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ಆರ್‌ಎಸ್‌ಎಸ್, ಭಜರಂಗದಳದಿಂದ ಕ್ರೈಸ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಚರ್ಚ್‌ಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂದು ದೂರಿದರು.
ದುಷ್ಕರ್ಮಿಗಳು 200ಕ್ಕೂ ಹೆಚ್ಚು ಚರ್ಚ್‌ಗಳನ್ನು ಸುಟ್ಟು ಹಾಕಿದ್ದು, 100ಕ್ಕೂ ಹೆಚ್ಚು ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮಕ್ಕಳು ತಂದೆ, ತಾಯಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವಂತಹ ಹೀನಕೃತ್ಯ ನಡೆಸಲಾಗಿದೆ.
ಹಿಂಸೆಯನ್ನು ತಡೆಗಟ್ಟುವಲ್ಲಿ ವಿಲವಾಗಿರುವ ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಹಿಂಸಾಚಾರ ನಡೆಸುತ್ತಿರುವ ದುಷ್ಕರ್ಮಿಗಳನ್ನು ಬಂಸಿ ಕಠಿಣ ಕ್ರಮಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ಮತ್ತು ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಅಧ್ಯಕ್ಷ ರಾಬರ್ಟ್ ರಾಜಶೇಖರ್, ಕ್ರೈಸ್ತ್ ಧರ್ಮಗುರುಗಳಾದ ಎ.ಸಿಯೋಮನ್, ಆರ್.ಸ್ಯಾಮುವೆಲ್, ಅಬ್ರಾಹಂ ಜಾನ್, ಎಸ್.ಸುಮೀತ್ರ, ಪುಟ್ಟರಾಜ್, ಆಗಸ್ಟಿಯನ್, ಸೆಲ್ವಿಯನ್ ಡೆವಿಡ್, ಪ್ರಮೋದ ಸ್ಯಾಮುವೆಲ್, ಸಿಮೋನ್‌ರಾಜ್ ಹಾಗೂ ಇನ್ನಿತರರಿದ್ದರು.