ಕ್ರೈಸ್ಟ್ ಶಾಲೆಯಲ್ಲಿ ಯೋಗ ದಿನ ಆಚರಣೆ

24_HSN_02
Published on

ಹಾಸನ: ಹಾಸನದ ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಯೋಗ ಪಟುವಾದ ಸುರೇಶ್ ಪ್ರಜಾಪತಿ ಅವರು ಜಾನು ಶೀರ್ಷಾಷನ, ವೃಕ್ಷಾಸನ, ಅರ್ಧ ಕಟಿ ಚಕ್ರಾಸನ ಹಾಗೂ ಕುಳಿತು ಮಾಡುವ ಆಸನಗಳನ್ನು ಹಂತ-ಹಂತವಾಗಿ ಹೇಳಿಕೊಟ್ಟರು.

ಪ್ರಾಣಾಯಾಮದಲ್ಲಿ ಏಕಾಗ್ರತೆಯನ್ನು ಸಾಧಿಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ಪ್ರೇರಣಾದಾಯಕವಾಗಿ ಹೇಳಿಕೊಟ್ಟರು. ಪೂರಕ-ರೇಚಕ-ಕುಂಭಕವು ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಷ್ಟು ಪ್ರಾಮುಖ್ಯ ಎಂಬುದನ್ನು ವಿವರಿಸಿದರು.

ಒಂದರಿಂದ ನಾಲ್ಕನೆ ತರಗತಿಯ ಮಕ್ಕಳಿಗೆ ಯೋಗಪಟುಗಳಾದ ಡಯಾನಾ, ರಂಗನಾಥ್ ಹಾಗೂ ಮೇಘನಾ ಅವರಿಂದ ಅನುಲೋಮ-ವಿಲೋಮ ಪ್ರಕ್ರಿಯೆ, ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ ಮುಂತಾದ ಆಸನಗಳ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ರೆವೆರೆಂಡ್ ಫಾದರ್ ಅನುಮೋನ್ ಜೋಸೆಫ್, ಆಡಳಿತಾಧಿಕಾರಿ ರೆವರೆಂಡ್ ಫಾದರ್ ರಿಜೋ ಥಾಮಸ್, ಉನ್ನತ ಅಧಿಕಾರಿ ರೆವರೆಂಡ್ ಫಾದರ್ ಅಲೆಕ್ಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net