ಕ್ರೀಡೆಯಿಂದ ಶಾರೀರಿಕ, ಬೌದ್ಧಿಕ ಬೆಳವಣಿಗೆ

nrp kabaddi
ಎನ್.ಆರ್.ಪುರ ತಾಲೂಕು ಶೆಟ್ಟಿಕೊಪ್ಪದಲ್ಲಿ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಎನ್.ಎಂ.ಕಾಂತರಾಜ್ ಉದ್ಘಾಟಿಸಿದರು. ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ನಿದರ್ಶನ್, ಬಿ.ಎಲ್.ನಿಶಾಂತ್, ಅಜಂತ, ಎಲ್ದೋ, ಸಾಜು ಇದ್ದರು.
Published on

ಎನ್.ಆರ್.ಪುರ: ಕ್ರೀಡಾ ಚಟುವಟಿಕೆಗಳು ಮನುಷ್ಯನ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಎಂದು ಶೆಟ್ಟಿಕೊಪ್ಪ ಸ್ಪೋರ್ಟ್ಸ್ ಕ್ಲಬ್ ಗೌರವ ಸಂಚಾಲಕ ಎನ್.ಎಂ.ಕಾಂತರಾಜ್ ಹೇಳಿದರು.

ಶನಿವಾರ ಶೆಟ್ಟಿಕೊಪ್ಪ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಯುವಜನರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು. ಗ್ರಾಮೀಣ ಕ್ರೀಡೆಗಳಲ್ಲಿ ಗ್ರಾಮೀಣ ಜನರ ಬದುಕು, ಭಾವನೆ ಅಡಗಿವೆ. ಅವುಗಳನ್ನು ಗೌರವಿಸಿ ಬೆಳೆಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದರು.

ಈ ಹಿಂದೆ ಕ್ರೀಡಾಕೂಟಕ್ಕೆ ಶೆಟ್ಟಿಕೊಪ್ಪ ಪ್ರಸಿದ್ಧಿ ಪಡೆದಿತ್ತು. ನಿರಂತರವಾಗಿ ಗ್ರಾಮೀಣ ಕ್ರೀಡಾಕೂಟಗಳು ನಡೆಯುತ್ತಿದ್ದವು. ಆದರೆ ಅವುಗಳಿಂದ ಈಗ ಯುವಜನರು ದೂರಾಗುತ್ತಿದ್ದಾರೆ ಎಂದರು.

ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿ, ಯುವಜನರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಅವರು ಹಠ, ಛಲ, ಗುರಿ ಹೊಂದಿರಬೇಕು. ದುಶ್ಚಟಗಳಿಗೆ ದಾಸರಾಗಬಾರದು ಎಂದರು.

ಗ್ರಾಪಂ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ವಾಲಿಬಾಲ್ ಆಟ ಮನುಷ್ಯನ ಪ್ರತಿ ಅಂಗವನ್ನೂ ನಿಯಂತ್ರಣದಲ್ಲಿಡುತ್ತದೆ. ಯೋಚನೆ, ಗುರಿ, ದೃಷ್ಟಿ ಎಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ. ಶರೀರಕ್ಕೆ ಉತ್ತಮ ವ್ಯಾಯಾಮ ಸಿಗಲಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಸದಾ ಉಲ್ಲಾಸ ಮತ್ತು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

ಸಂಚಾಲಕ ನಿದರ್ಶನ್ ಮಾತನಾಡಿ, ಕೆಲ ಯುವಕರು ತಂಡ ಕಟ್ಟಿ ವಾಲಿಬಾಲ್ ಆಟ ಪ್ರಾರಂಭಿಸಿದೆವು. ಊರಿನ ಅನೇಕರು ಕೈಜೋಡಿಸಿ ನಮ್ಮನ್ನು ಹುರಿದುಂಬಿಸಿದರು. ಕ್ರೀಡಾ ಸಾಮಗ್ರಿಗಳನ್ನು ನೀಡಿದರು. ಪ್ರತಿದಿನವೂ ಸಂಜೆ ನಾವು ಆಟವಾಡುತ್ತ ಬಂದಿದ್ದೇವೆ. ಇದರಿಂದ ಉತ್ತೇಜಿತರಾಗಿ ಕ್ರೀಡಾಕೂಟ ನಡೆಸಲು ಮುಂದಾದೆವು. ಇದಕ್ಕೆ ಗ್ರಾಮಸ್ಥರ ಸಹಕಾರ ಸಿಕ್ಕಿದೆ ಎಂದರು.

ಪಂದ್ಯಾವಳಿಯಲ್ಲಿ 15 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಹಾಗೂ ಟ್ರೋಫಿಯನ್ನು ಸಿಂಸೆ ವಾರಿಯರ್ಸ್‌ ತಂಡ, ದ್ವಿತೀಯ ಬಹುಮಾನವನ್ನು ಸಿಂಹನಗದ್ದೆ ತಂಡ, ತೃತೀಯ ಬಹುಮಾನ ಯುನೈಟೆಡ್ ್ರೆಂಡ್ಸ್ ತಂಡ ಪಡೆದವು. ವಾಲಿಬಾಲ್ ಕ್ರೀಡಾಪಟು ಬಿ.ಎಲ್.ನಿಶಾಂತ್, ಅಜಂತ, ಎಲ್ದೋ, ಸಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net