

ಕಮಲಾಪುರ: ಕ್ರೀಡೆಗಳ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಶಕ್ತಿ ವೃದ್ಧಿಯಾಗುವುದರ ಜತೆಗೆ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದು ಡಯಟ್ ಪ್ರಾಂಶುಪಾಲ ಬಸವರಾಜ ಮಾಯಾಚಾರ್ಯ ಹೇಳಿದರು.
ಇಲ್ಲಿನ ಕನ್ಯಾ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಗುರಿ ಸಾಧನೆಯತ್ತ ಮುನ್ನುಗ್ಗಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಿಟ್ಟೆಸಾಬ್ ಮುಲ್ಲಾ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರ ಓಕಳಿ, ಅಂಬಿಕಾ ಉಪ್ಪಿನ್, ಉಮೇಶ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಮುಖ್ಯ ಗುರು ಅಂಬಾದಾಸ, ಪೀರಪ್ಪ ಶೋಭಾ ಇತರರಿದ್ದರು.
ಬಾಲಕಿಯರ ಕಬಡ್ಡಿಯಲ್ಲಿ ಕಮಲಾಪುರ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ, ಬಾಲಕ ಮತ್ತು ಬಾಲಕಿಯರ ಖೋಖೋದಲ್ಲಿ ಕಲಮೂಡದ ಮುರಾರ್ಜಿ ದೇಸಾಯಿ ವಸತಿ ಶಾಲೆ, ವಾಲಿಬಾಲ್‌ನಲ್ಲಿ ಕಮಲಾಪುರದ ಮಾತೃವಾತ್ಸಲ್ಯ ಶಾಲೆ, ಬಾಲಕರ ಕಬಡ್ಡಿಯಲ್ಲಿ ಶಂಕರಶೆಟ್ಟಿ ಪಾಟೀಲ್ ಶಾಲೆ, ೧೦೦ ಮೀ.ಓಟದಲ್ಲಿ ಓಕಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಜಯ ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.