

ನೇಸರಗಿ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಸುತ್ತದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ವಿದ್ಯಾಮಂದಿರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೇಸರಗಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕೆಂದರು.
ದೈಹಿಕ ಶಿಕ್ಷಣ ಶಿಕ್ಷಕ ಎಚ್.ಐ.ಬೆಳವಣಕಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷ ನಿಂಗಪ್ಪ ಮಾಳಣ್ಣವರ, ಶಾಲೆಯ ಆಡಳಿತಾಧಿಕಾರಿ ಫಾದರ್ ಮೆನಿನೊ, ಪದವಿ ಕಾಲೇಜಿನ ಪ್ರಾಚಾರ್ಯ ವಿನಯ ಕುಲಕರ್ಣಿ, ಮುಖ್ಯ ಶಿಕ್ಷಕ ಆರ್.ಜಿ.ಯರಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ.ಹೊಟ್ಟಿ, ಶರೀಫ್‌ಸಾಹೇಬ್ ನದಾಫ್, ಸಚಿನ ಪಾಟೀಲ, ಬಾಳಪ್ಪ ಮಾಳಗಿ, ಯುವ ಮುಖಂಡ ಸಚಿನ ಪಾಟೀಲ, ಗ್ರಾಪಂ ಸದಸ್ಯ ನಿಂಗಪ್ಪ ತಳವಾರ, ಯಮನಪ್ಪ ಪೂಜೇರಿ, ಡಾ.ಬಿ.ಬಿ.ದೇಸಾಯಿ, ಡಾ.ಪ್ರಕಾಶ ಹಲ್ಯಾಳ, ಸುರೇಶ ರಾಯಪ್ಪಗೋಳ, ಪ್ರಕಾಶ ತೋಟಗಿ, ರವಿ ಸಿದ್ದಮ್ಮನವರ, ಎಚ್.ಐ.ಬೆಳವಣಕಿ, ಎ,ಎಸ್.ಲೋಬೊ, ಎಸ್.ಬಿ.ಬೆಟಗೇರಿ, ಕೆ.ಡಿ.ಬೋಗೂರ, ಪ್ರಶಾಂತ ಹಂಜಿ, ಬಸನಗೌಡ ದೊಡಗೌಡರ ಇತರರು ಇದ್ದರು.