ಕ್ರೀಡೆಯಿಂದ ದೈಹಿಕ, ಮಾನಸಿಕ ಸದೃಢ ಸಾಧ್ಯ

11 krp 01
11 ಕೆ.ಆರ್.ಪಿ; 01; ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನಕ್ಕಾಗಿ ಕ್ರೀಡೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಪುರಸಭಾ ಸದಸ್ಯ ಬಸ್ ಸಂತೋಷ್‌ಕುಮಾರ್ ಅಭಿಮತ

ಕೆ.ಆರ್.ಪೇಟೆ: ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ಪುರಸಭಾ ಸದಸ್ಯ ಬಸ್ ಸಂತೋಷ್‌ಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಬಸ್ ತಿಮ್ಮೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನಕ್ಕಾಗಿ ಕ್ರೀಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಎಲ್ಲ ಹೋಬಳಿಗಳಲ್ಲೂ 18 ರಿಂದ 30 ವಷರ್ದೊಳಗಿನ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ತರಬೇತಿ ಕೊಡಿಸಲಾಗುತ್ತಿದೆ ಎಂದರು.

ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಜೆಡಿಎಸ್ ಮುಖಂಡ ಎ.ಆರ್.ರಘು ಮಾತನಾಡಿದರು. ಪುರಸಭಾ ಮಾಜಿ ಸದಸ್ಯ ಕಿರಣ್‌ಕುಮಾರ್(ಗುಂಡ) ಮಂದಗೆರೆ ಹೇಮಾವತಿ ಪ್ರೌಢಶಾಲೆ ಅಧ್ಯಕ್ಷ ದರ್ಶನ್, ನಿವೃತ್ತ ಉಪಪ್ರಾಂಶುಪಾಲ ಆರ್.ವಿ.ವೆಂಕಟರಾಮು, ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್, ಮಂಜೇಶ್, ನಾಟನಹಳ್ಳಿ ರಾಮೇಗೌಡ, ಸಾರಂಗಿ ವಿಶ್ವನಾಥ್, ಮಂಡ್ಯ ಸಹಕಾರ ಯೂನಿಯನ್ ನಿರ್ದೇಶಕ ಗದ್ದೆಹೊಸೂರು ಮುರುಳೀಧರ್, ಗುತ್ತಿಗೆದಾರ ತಮ್ಮಯ್ಯ, ಬಂಡಿಹೊಳೆ ಗ್ರಾಪಂ ಸದಸ್ಯ ದರ್ಶನ್, ಕತ್ತರಘಟ್ಟ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net