ಕ್ರೀಡೆಯಿಂದ ದೇಹ ಹಾಗೂ ಮನಸ್ಸು ಸದೃಡ: ಸಿ.ಎನ್.ಬಾಲಕೃಷ್ಣ

ಕ್ರೀಡೆಯಿಂದ ದೇಹ ಹಾಗೂ ಮನಸ್ಸು ಸದೃಡ: ಸಿ.ಎನ್.ಬಾಲಕೃಷ್ಣ
Published on


ಚನ್ನರಾಯಪಟ್ಟಣ: ದೇಹ ಹಾಗೂ ಮನಸ್ಸು ಸದೃಡವಾಗಿದ್ದಲ್ಲಿ ಮಾತ್ರ ಕ್ರೀಡೆಗಳಲ್ಲಿ ಪಾಲ್ಗೊಂಡು ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ದೈಹಿಕ ಪರಿವೀಕ್ಷಕರ ಸಂಘದ ಸಹಯೋಗದಲ್ಲಿ ಶನಿವಾರ ಅಯೋಜಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.


ಸ್ಪರ್ಧೆಯಲ್ಲಿ ಸೋತವರು ದೃತಿಗೆಡಬೇಕಾಗಿಲ್ಲ. ಸೋಲಿಗೆ ಕಾರಣ ತಿಳಿದು ಮುಂದಿನ ಸ್ಪರ್ಧೆಗೆ ತಯಾರು ಮಾಡಿಕೊಳ್ಳಬೇಕು. ಯುವ ಸಮುದಾಯವು ದೇಶದ ಆಸ್ತಿಯಾಗಬೇಕು. ಯುವ ಜನತೆ ಸನ್ಮಾರ್ಗದಲ್ಲಿ ನಡೆದರೆ ದೇಶದ ಪ್ರತಿ ರಂಗವೂ ಸರಿದಾರಿಯಲ್ಲಿ ಸಾಗುತ್ತದೆ ಎಂದರು.


ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಜಿಲ್ಲೆಯ ಸರ್ಕಾರಿ ಹಿರಿಯ ಶಾಲೆಗಳು ಹಾಗೂ ಫ್ರೌಢಶಾಲೆಗಳ ವಿದ್ಯಾರ್ಥಿಗಳು ವಂಚಿತಗೊಳ್ಳುವ ಹಿನ್ನಲೆ ಅನುದಾನ ಆಲಭ್ಯತೆ ಅರಿತು ಮಕ್ಕಳ ಭವಿಷ್ಯದ ದೃಷ್ಠಿಯಿಂದ ನಮ್ಮ ತಾಲೂಕಿನಲ್ಲಿಯೇ ವೈಯಕ್ತೀಕವಾಗಿ ಪ್ರಾಯೋಜಕತ್ವ ವಹಿಸಲಾಗಿದೆ ಎಂದರು.


ಜಿಲ್ಲಾ ದೈಹಿಕ ಪರಿವೀಕ್ಷಕ ವೆಂಕಟೇಶ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ನಡೆಯಬೇಕಾದ ಸ್ಪರ್ಧೆಯನ್ನು ಸಂಪೂರ್ಣ ವೆಚ್ಚ ಭರಿಸಿ ಶಾಸಕ ಸಿ.ಎನ್.ಬಾಲಕೃಷ್ಣ ಅಚ್ಚುಕಟ್ಟಾಗಿ ಅಯೋಜನೆ ಮಾಡಿದ್ದಾರೆ. ಕರಾಟೆ ಆತ್ಮರಕ್ಷಣೆಯ ಕ್ರೀಡೆ, ಎದುರಾಳಿ ದೈಹಿಕವಾಗಿ ಬಲಶಾಲಿಯಾಗಿದ್ದರೂ ಕರಾಟೆ ಪಟುಗಳಿಂದ ಆತನನ್ನು ಮಣಿಸಲು ಸಾಧ್ಯ ಎಂದರು.
ಇನ್ನು ಇಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು ನ.11 ರಂದು ಕಟೀಲು ನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ 250 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಈ ಪೈಕಿ 40 ಮಕ್ಕಳು ಆಯ್ಕೆಯಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.


ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ದೈಹಿಕ ಪರಿವೀಕ್ಷಕ ಮಹಾದೇವ್, ಮುಖ್ಯಶಿಕ್ಷಕ ಮಂಜು, ಪ್ರಮುಖರಾದ ಆನಂದ್, ಲೋಕೇಶ್, ರವೀಂದ್ರ, ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net