ಕ್ರೀಡೆಯಿಂದ ದೇಹ, ಮನಸ್ಸು ಸದೃಢ

23ard01
 ಔರಾದ್ ತಾಲೂಕಿನ ಉಜನಿ ಪ್ರೇಮಾಂಜಲಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ್ ಶಾಲಾ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಜೋಯಲ್ ಜಯರಾಜ್, ಬಲಭೀಮ ಕುಲಕರ್ಣಿ, ಮುಖ್ಯಗುರು ಸಿಸ್ಟರ್ ಸರಿತಾ, ಸಿಸ್ಟರ್ ಲಿನೇಟ್, ರಾಜಕುಮಾರ, ಎಂ.ಡಿ,ಗಫಾರ್, ರವೀಂದ್ರರೆಡ್ಡಿ, ಮಾಣಿಕ, ಅನಿಲರೆಡ್ಡಿ, ಸತೀಶ ನಾಗೂರೆ ಇದ್ದರು.
Published on

ಔರಾದ್: ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಆಟಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಜೋಯಲ್ ಜಯರಾಜ್ ಹೇಳಿದರು.

ತಾಲೂಕಿನ ಉಜನಿ ಪ್ರೇಮಾಂಜಲಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ್ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಮ್ಮ ಮನಸ್ಸಿನ ದೃಢತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದಷ್ಟೆ ಆಟೋಟಗಳು ಪ್ರಮುಖ ಭಾಗವಾಗಿವೆ ಎಂದು ಹೇಳಿದರು.

ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ ಮಾತನಾಡಿದರು. ಮುಖ್ಯಗುರು ಸಿಸ್ಟರ್ ಸರಿತಾ, ಸಿಸ್ಟರ್ ಲಿನೇಟ್, ರಾಜಕುಮಾರ, ಎಂ.ಡಿ ಗಫಾರ್, ರವೀಂದ್ರರೆಡ್ಡಿ, ಮಾಣಿಕ, ಜಯಕುಮಾರ, ಅನಿಲರೆಡ್ಡಿ, ಸತೀಶ ನಾಗೂರೆ, ಸಿಸ್ಟರ್ ಕವಿತಾ, ಸಿಸ್ಟರ್ ಪ್ರೀಯಾಂಕಾ, ಸಿದ್ದಪ್ಪ, ಸರೋಜನಿ, ವೆಂಕಟರಾವ ಪಾಟೀಲ್, ಗಣಪತಿ ಇತರರಿದ್ದರು.

ರಶೀದ್ ವಂದಿಸಿದರು. ದೇವಿಕಾ ಖಾನಪುರೆ ನಿರೂಪಣೆ ಮಾಡಿದರು. ಕ್ರೀಡಾಕೂಟದಲ್ಲಿ ಏಳು ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net