ಕ್ರೀಡೆಯಿಂದ ಉತ್ತಮ ಬಾಂಧವ್ಯ ಬೆಳೆಸುವಂತಹ ವೇದಿಕೆ: ಎಂ.ಚಂದ್ರೇಗೌಡ

ಕ್ರೀಡೆಯಿಂದ ಉತ್ತಮ ಬಾಂಧವ್ಯ  ಬೆಳೆಸುವಂತಹ   ವೇದಿಕೆ: ಎಂ.ಚಂದ್ರೇಗೌಡ
Published on

ಹಾಸನ: ಕ್ರೀಡೆಯಿಂದ ಜಿಲೆ,್ಲ ರಾಜ್ಯ, ದೇಶ ದೇಶಗಳ ನಡುವೆ ಉತ್ತಮ ಬಾಂಧವ್ಯವನ್ನ ಬೆಳೆಸುವಂತಹ ಒಂದು ಉತ್ತಮ ವೇದಿಕೆ. ಇಂತಹ ಕ್ರೀಡಾಕೂಟಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು ಎಂದು ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೈಸೂರು ದಸರ ವಿಭಾಗ ಮಟ್ಟದ ಖೋಖೋ ಮತ್ತು ನೆಟ್ ಬಾಲ್ ಕ್ರೀಡೆಗೆ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ದಸರಾ ಕ್ರೀಡಾಕೂಟ ಎಂಬುದು ಇಂದು ನೆನ್ನೆದಲ್ಲ, ಇದಕ್ಕೆ ಪುರಾತನ ಇತಿಹಾಸವಿದೆ. ಮೈಸೂರಿನ ರಾಜ ಮಹಾರಾಜರ ಕಾಲದಿಂದಲೂ ಕೂಡ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬುದಕ್ಕೆ ಈ ದಸರಾ ಕ್ರೀಡಾಕೂಟ ಒಂದು ನಿದರ್ಶನ ಎಂದರು.
ಮೈಸೂರು ದಸರಾ ಸಂದರ್ಭದಲ್ಲಿ ಪುರಾತನ ಕಾಲದ ಗದಾಯುದ್ಧ, ಮುಷ್ಟಿ ಯುದ್ಧ, ಜಟ್ಟಿ ಕಾಳಗ ನಡೆಯುತ್ತಿದ್ದವು ಆದರೆ, ಇತ್ತೀಚಿನ ದಿನಗಳಲ್ಲಿ ಹಲವು ಕ್ರೀಡೆಗಳು ಇದಕ್ಕೆ ಸೇರ್ಪಡೆಯಾಗಿ ಈಗ ತಾಲೂಕು, ಜಿಲ್ಲಾ ಮತ್ತು ಮೈಸೂರು ವಿಭಾಗದಲ್ಲಿ ಕ್ರೀಡಾಕೂಟಗಳು ನಡೆಯುತ್ತಿದ್ದು, ಇದರಲ್ಲಿ ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚು ಪ್ರಶಸ್ತಿಗಳನ್ನು ತರುವ ನಿಟ್ಟಿನಲ್ಲಿ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. ಈ ಬಾರಿ ಸೋತವರು ಮುಂಬರುವ ದಿನಗಳಲ್ಲಿ ಗೆಲುವು ಸಾಧಿಸಬಹುದು. ಇದಕ್ಕೆ ಕಠಿಣ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾತಿನಿಧ್ಯತೆ ಸಿಗುತ್ತಿದೆ. ಆದ್ದರಿಂದಲೇ ಅವರು ಒಲಂಪಿಕ್ಸ್‌ನಂತಹ ಬಹುದೊಡ್ಡ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನ ಗೆಲ್ಲುತ್ತಿದ್ದಾರೆ. ಆದರೆ ನಮ್ಮ ದೇಶ ಸಾಕಷ್ಟು ಹಿಂದೆ ಇದ್ದು, ಮುಂದಿನ ದಿನಗಳಲ್ಲಿ ಅದನ್ನ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಯುವಕರು ಮತ್ತು ಯುವತಿಯರು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ದಸರ ಕ್ರೀಡಾಕೂಟದಲ್ಲಿ ದಸರ ಎರಡು ಕ್ರೀಡೆಗಳು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತೋಷವಾಗಿದೆ. ಕ್ರೀಡೆಯಲ್ಲಿ ಎಲ್ಲಾರೂ ಸಂತೋಷದಿಂದ ಭಾಗವಹಿಸಬೇಕು. ಮೈಸೂರು ವಿಭಾಗದ ಕ್ರೀಡೆಯಲ್ಲಿ ನಮ್ಮ ಜಿಲ್ಲೆಯವರು ಗೆಲವು ಸಾಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಮಹಾದೇವ್, ಚಕ್ರಪಾಣಿ, ಸಿ.ಕೆ. ರಘು, ವಾಲಿಬಾಲ್ ತರಬೇತುದಾರ ಎಸ್.ಎನ್. ರಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಆರ್. ಪಾಲಾಕ್ಷ ಸೇರಿದಂತೆ ಇತರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net