

ಉಗರಗೋಳ: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿ ಸಬೇಕು ಎಂದು ಯಲ್ಲಮ್ಮ ದೇವಿ ದೇವಸ್ಥಾನದ ಅಧೀಕ್ಷಕ ಅರವಿಂದ ಮಳಗೆ ಹೇಳಿದರು.
ಇಲ್ಲಿನ ಶ್ರೀ ರೇಣುಕಾ ಯಲ್ಲಮ್ಮ ದೇವಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರೇಕುಂಬಿ ವಲಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ಮನರಂಜನೆಗೆ ಸೀಮಿತವಾಗಿಲ್ಲ. ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಸುವಲ್ಲಿ ಕ್ರೀಡೆ ಮುಖ್ಯ ಮಾತ್ರ ವಹಿಸುತ್ತದೆ. ನಾಯಕತ್ವ ಗುಣ ಬೆಳೆಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಸಶಕ್ತ ಭಾರತ ನಿರ್ಮಾಣಕ್ಕೆ ಸದೃಢವಾದ ಯುವಸಮೂಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ವೈ.ಆರ್.ಚನ್ನಪ್ಪಗೌಡ್ರ ಮಾತನಾಡಿ, ಸದೃಢ ಆರೋಗ್ಯಕ್ಕಾಗಿ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ.ಕಾಳಪ್ಪನವರ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಉಪಾಧ್ಯಕ್ಷೆ ರೇಣುಕಾ ಸಿದ್ದಕ್ಕನವರ, ಪರಶುರಾಮ ಇಮ್ರಾಪುರ, ನಾಗಪ್ಪ ಬಡೆಪ್ಪನವರ, ಅಪ್ಪು ಕಾಳಪ್ಪನವರ, ಡಿ.ಆರ್.ಚವ್ಹಾಣ, ಸುಧೀರ ವಾಂಗಿ, ಸೋಮಗೊಂಡ ಹೂಲಿ, ವಿರೂಪಾಕ್ಷ ಬೇವಿನಗಿಡದ, ಪಿ.ಎ್.ಗೋವನಕೊಪ್ಪ, ಎಸ್.ಎಂ.ಬೆಟಗೇರಿ, ಡಿ.ಡಿ.ನಾಡಗೌಡ್ರ ಇತರರಿದ್ದರು. ಮುಖ್ಯಶಿಕ್ಷಕಿ ಆರ್.ಪಿ.ಪವಾರ ಸ್ವಾಗತಿಸಿದರು. ವಿ.ವಿ.ಪದಕಿಮಠ, ಎಸ್.ಜಿ.ಹಿರೇಮಠ ಇತರರಿದ್ದರು.