

ಕುಕನೂರು (ಕೊಪ್ಪಳ): ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನು ಸಮಾನವಾಗಿ ಸ್ವೀಕಾರ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಹಾಗೂ ವಕೀಲ ಗವಿಸಿದ್ಧಪ್ಪ ಆರೇರ ಹೇಳಿದರು.
ಪಟ್ಟಣದ ಶ್ರೀಗವಿಸಿದ್ದೇಶ್ವರ ಪ್ರೌಢ ಶಾಲೆಯ ಆವಣರದಲ್ಲಿ 2023-24 ನೇ ಸಾಲಿನ ಕುಕನೂರು ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಎಂಬುದು ಆರೋಗ್ಯಕ್ಕೆ ಅನುಕೂಲವಾಗಿದ್ದು, ಈ ಕ್ರೀಡೆಯನ್ನು ಸತತವಾಗಿ ಬಳಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಜೀವನಕ್ಕೆ ಆರೋಗ್ಯಕ್ಕೆ ಪುಷ್ಟಿ ನೀಡಿದಂತೆಯಾಗುತ್ತದೆ. ಮುಂದೆ ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಬಯಸಿದಾಗ ಕ್ರೀಡಾ ಪ್ರಮಾಣ ಪತ್ರ ಕೂಡ ನೆರವಾಗಲು ಸಹಾಯಕವಾಗುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯೆ ಜೊತೆಗೆ ಕ್ರೀಡಾಸಕ್ತಿಯು ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗಿಯಾಗಲು ಮುಂದಾಗಬೇಕು ಎಂದರು.
ಪಪಂ ಸದಸ್ಯ ಸದಸ್ಯ ಸಿದ್ದು ಉಳ್ಳಾಗಡ್ಡಿ, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ವಿ.ಎ.ಅಂಗಡಿ, ಮುಖ್ಯೋಪಾಧ್ಯಾಯ ಎಸ್.ಜಿ.ಪಾಟೀಲ್, ಮುಖ್ಯೋಪಾಧ್ಯಾಯರಾದ ನಿಂಗರಾಜ, ಬಸಮ್ಮ ಅರಳಲಿಮಠ, ದೈಹಿಕ ಶಿಕ್ಷಕ ಆರ್.ಡಿ.ರಾಠೋಡ, ಶಿಕ್ಷಕರಾದ ಶರಣಪ್ಪ ಗುಡ್ಲಾನೂರ, ವಿ.ಎ.ಹಿರೇಮಠ, ಎನ್.ಟಿ.ಸಜ್ಜನ್, ದೇವೇಂದ್ರಪ್ಪ, ವಿ.ಬಿ.ಕಟ್ಟಿ, ತಾಲೂಕ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಉಮೇಶ್ ಕಂಬಳಿ, ಹನುಮಂತಪ್ಪ ನಾಮದಾರ, ಪತ್ರಕರ್ತ ರುದ್ರಪ್ಪ ಭಂಡಾರಿ ಇತರರಿದ್ದರು.