

ಯಾದಗಿರಿ : ಮಕ್ಕಳ ದೈಹಿಕವಾಗಿ ಸದೃಢವಾಗಲಿ ಎಂಬ ಕಾರಣದಿಂದ ಸರಕಾರ ಶಾಲಾ ಹಂತದಲ್ಲೇ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ರ್ಯಾಂಕ್ ಬರಬೇಕು ಎಂಬುದನ್ನು ಅಪೇಕ್ಷಿಸುತ್ತಿದ್ದಾರೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ಬೆರೆಯಲು ಬಿಡುತ್ತಿಲ್ಲ. ಮಕ್ಕಳಿಗೆ ಆಟಗಳಿಂದ ವಿಮುಖರನ್ನಾಗಿ ಮಾಡಬೇಡಿ ಎಂದು ಸಲಹೆ ನೀಡಿದರು.
ಆಧುನಿಕರಣದ ಹೊಡೆತದಿಂದ ಇಂದು ಗ್ರಾಮೀಣ ಕ್ರೀಡೆಗಳು ಅಳಿವಿನ ಅಂಚಿನಲ್ಲಿವೆ. ಮಲ್ಲಗಂಬ, ಭಾರ ಎತ್ತುವುದು ಹೀಗೆ ನಾನಾ ಕ್ರೀಡೆಗಳಲ್ಲಿ ಆ ಕಾಲದಲ್ಲಿ ಜನಜನಿತವಾಗಿದ್ದವು. ಆದರೆ, ಈಗ ಕೇವಲ ಮೊಬೈಲ್ ಹಾಗೂ ಇಂಟರ್ನೆಟ್ಗೆ ಮಕ್ಕಳು ಅಂಟಿಕೊಂಡಿದ್ದಾರೆ. ಇದರು ಸರಿಯಾದ ಬೆಳವಣಿಗೆ ಅಲ್ಲ ಎಂದರು.
ಇಂದಿನ ಕ್ರೀಡಾಕೂಟದಲ್ಲಿ ವಿದ್ಯಾಥರ್ಿಗಳು ಪರಸ್ಪರ ಸಾಮರಸ್ಯದಿಂದ ಆಡಬೇಕು. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಗಳಲ್ಲಿ ನಾವು ಭಾಗವಹಿಸುವುದು ಮುಖ್ಯ. ತೀಪರ್ುಗಾರರು ಸಹ ತಾರತಮ್ಯ ಮಾಡಬಾರದು ಎಂದು ಕಿವಿಮಾತು ಹೇಳಿದರು.