

ಚನ್ನರಾಯಪಟ್ಟಣ: ಕ್ರೀಡಾಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಕನಿಷ್ಠ 500 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಙ ಹೇಳಿದರು.
ಪಟ್ಟಣದ ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಕ್ರೀಡಾಭಾರತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವಷರ್ ಕ್ರೀಡಾ ಇಲಾಖೆಗೆ ಕೇವಲ 14 ಕೋಟಿ ರೂ. ಅನುದಾನ ನೀಡುತ್ತಿದ್ದು, ಇದರಿಂದ ಗುಣಮಟ್ಟದ ಕ್ರೀಡಾಂಗಣಗಳ ಕೊರತೆ ಕಾಡುತ್ತಿದೆ. ನರೇಗಾ ಯೋಜನೆಯಡಿ ತಾಲೂಕಿನ ಪ್ರತಿಯೊಂದು ಪಂಚಾಯಿತಿ ಕೇಂದ್ರದಲ್ಲೂ 20 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ತಾಲೂಕು ಕ್ರೀಡಾಂಗಣವನ್ನು 1.25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕ್ರೀಡಾಕ್ಷೇತ್ರದ ಬೆಳವಣಿಗೆಗೆ ಬೇರೆ ಬೇರೆ ಇಲಾಖೆಗಳಿಂದಲೂ ಅನುದಾನ ತರಲಾಗುತ್ತಿದೆ. ಮತ್ತಷ್ಟು ಅಭಿವೃದ್ಧಿಗೆ ಸರ್ಕಾರವನ್ನು ಒತ್ತಾಯಿಸಿ ಹೆಚ್ಚಿನ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.
ಜ್ಞಾನಸಾಗರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ನಾಗೇಶ್ ಮಾತನಾಡಿ, ಇಂದಿನ ಶಿಕ್ಷಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ದೇಶ ನಿರ್ಮಾಣದಲ್ಲಿ ಕ್ರೀಡಾಭಾರತಿಯ ಪಾತ್ರ ದೊಡ್ಡದಾಗಿದೆ. ಶಿಕ್ಷಣದ ಮುಖ್ಯ ಉದ್ದೇಶವೇ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಿ ಸಿಟ್ಟಿನಲ್ಲಿ ಮಹತ್ವ ನೀಡಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ್, ವಿವೇಕಾನಂದ ಇಂಟರ್‌ನ್ಯಾಷನಲ್ ಶಾಲೆ ಅಧ್ಯಕ್ಷ ದಿನೇಶ್, ಕ್ರೀಡಾ ಭಾರತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಜೈನ್, ಕಾರ್ಯದರ್ಶಿ ಎಚ್.ಆರ್.ಮೊಹನ್‌ಕುಮಾರ್, ಸಹ ಕಾರ್ಯದರ್ಶಿ ಬಸವರಾಜ್, ಸಂಸ್ಥೆಯ ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಡಾ.ಭಾರತಿ, ಪ್ರಾಂಶುಪಾಲೆ ಡಾ.ಸುಜಾಫಿಲಿಪ್ ಹಾಗೂ ಇತರರು ಇದ್ದರು.