ಕ್ರೀಡಾಪಟುಗಳಿಗೆ ಭವ್ಯ ಸ್ವಾಗತ.

ಕ್ರೀಡಾಪಟುಗಳಿಗೆ ಭವ್ಯ ಸ್ವಾಗತ.
Published on

ಹೊಳೆನರಸೀಪುರ : ನೇಪಾಳದ ಕಟ್ಮಂಡುವಿನಲ್ಲಿ ನಡೆದ ಮಾರ್ಷಲ್ ಆರ್ಟ್ಸ ಪಂದ್ಯಾವಳಿಯಲ್ಲಿ ಜಯಗಳಿಸಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕ್ರೀಡಾಪಟುಗಳನ್ನು ಕ್ರೀಡಾಭಿಮಾನಿಗಳು ಭವ್ಯ ಸ್ವಾಗತ ನೀಡಿದರು.


ಮೊನ್ನೆ ಫೆಬ್ರವರಿ ಐರಿದಂದ ಏಳರವರೆಗೆ ನಡೆದ 7 ನೇ ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಮಟ್ಟದ ಸ್ಕ್ವಾಯ ಸ್ಪರ್ಧೆಯಲ್ಲಿ ನಾಲ್ಕು ಪದಕಗಳನ್ನು ಪಡೆದು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು ಮತ್ತು ಕ್ರೀಢಾಭಿಮಾನಿಳು ಗೆದ್ದು ಬಂದವಿದ್ಯಾರ್ಥಿಗಳಿಗ ಹೂಗುಚ್ಚ ನೀಡಿ ಸ್ವಾಗತಿಸಿ ಅವರುಗಳನ್ನು ವಾಧ್ಯಗೋಷ್ಟಿಗಳೊಂದಿಗೆ ಮೆರವಣಿಗೆಯಲ್ಲಿ ಅಂಬೆಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ವಿಜಯ ಗಳಿಸಿ ಪದಕ ತಂದ ವಿದ್ಯಾರ್ಥಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.


ಮೆರವಣಿಗೆಗ ಮೊದಲು ವಿಜಯೀ ವಿದ್ಯಾರ್ಥಿಗಳು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕ್ರೀಡಾಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.


ಪಟ್ಟಣದ ಬಲಿಜ ಸಮಾಜದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್, ಬಲಿಜ ಸಂಘದ ಅಧ್ಯಕ್ಷ ವೆಂಕಟೇಶ್ ಅವರುಗಳು ವಿಜೇತ ವಿದ್ಯಾರ್ಥಿಗಳಾದ ಐಸಿರಿ ಬೆಳ್ಳಿಪದಕ, ವಿ.ಲಿಖಿತ್ ಬೆಳ್ಳಿಪದಕ, ಎಚ್.ಎ.ಹರ್ಷವರ್ಧನ್ ಬೆಳ್ಳಿ ಪದ ಹಾಗು ಪ್ರೇಮಕುಮಾರ್ ಕಂಚಿನ ಪದಕಗಳನ್ನು ವಿತರಿಸಿ ಗೌರವಿಸಿಲಾಯಿತು.


ಪದಕ ವಿತರಣೆ ನಂತರ ಮಾತನಾಡಿದ ತರಬೇತುದಾರ ಅಬ್ದುಲ್‌ಹೈ ಮಾತನಾಡಿ ತಮ್ಮ ಶಾಲೆಯಲ್ಲಿ ತರಬೇತು ಪಡೆದು ಹಲವಾರು ಮಕ್ಕಳು ಕಳೆದ ಅನೇಕ ವರ್ಷಗಳಿಂದ ರಾಜ್ಯ ಮತ್ತು ಅಂತರಾಜ್ಯಗಳಲ್ಲಿ ಹಾಗು ನೇಪಾಳದಲ್ಲಿ ನಡೆದ ಸ್ಪರ್ಧೇಗಳಲ್ಲಿ ಜಯಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿ ಇದೇ ತಿಂಗಳು ಫೆಬ್ರವರಿ 20 ರಿಂದ 22 ರವರೆಗೆ ಹರಿಯಾಣದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಹೊಳೆನರಸೀಪುರ ಪಟ್ಟಣದ ಸ್ವ್ವಾಯ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳಾದ ಹರ್ಷವರ್ಧನ್, ಎಚ್.ಎಂ.ಹಜ್ಮತ್ ಉನ್ನಿಸ ಮತ್ತು ಶಮಿತಾದಯಾಳ್ ಭಾಗವಹಿಸಲಿದ್ದಾರೆ ಎಂದು ನುಡಿದರು.


ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕುಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್‌ಕುಮಾರ್ ಅವರು ಮಾತನಾಡಿ ನಮ್ಮ ಹೊಳೆನರಸೀಪುರದ ಮಕ್ಕಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ್ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ಪಾರಿತೋಷಕಗಳನ್ನು ತಂದಿದ್ದಾರೆ.


ತರಬೇತಿ ಪಡೆಯುತ್ತಿರುವ ಉಳಿದ ಮಕ್ಕಳು ಸಹ ತರಬೇತುದಾರ ಅಬ್ದುಲ್‌ಹೈ ಅವರಿಂದ ಮತ್ತಷ್ಟು ತರಬೇತಿ ಪಡೆದು ಮತ್ತಷ್ಟು ಪಾರಿತೋಷಕಗಳನ್ನು ತರುವುದರ ಜೊತೆಗೆ ಇಂದು ನೀವು ಕಲಿತಿರುವ ವಿದ್ಯೆ ಸಮಾಜದ ಏಳಿಗೆಗಾಗಿ ಬಳಸಿ ಎಂದು ಕಿವಿ ಮಾತು ಹೇಳಿದರು.


ಕಾರ್ಯಕ್ರಮದಲ್ಲಿ ನೇಪಾಳದಲ್ಲಿ ನಡೆದ ಸ್ಪರ್ಧೆಗೆ ತೆರಳಿದ್ದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.


ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ, ವಸಂತಯ್ಯ, ಕೆ.ಎ,ರವಿಕುಮಾರ್, ಎಚ್.ವಿ.ರವಿಕುಮಾರ್, ಅಭಿ, ನಾಝೀರ್ ಅವರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net