ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ

indi 7-1
ಇಂಡಿ ಪಟ್ಟಣದ ಕ್ರೀಡಾಂಗಣ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ರಾಜಶೇಖರ ದೈವಾಡಗಿ, ಮಹಾಂತೇಶ ಹಂಗರಗಿ, ನಂದಿಪ ರಾಠೋಡ ಇತರರಿದ್ದರು.
Published on


ಇಂಡಿ: ಪಟ್ಟಣದ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರ ಯುವಜನ ಹಾಗೂ ಕ್ರೀಡಾ ಇಲಾಖೆ ಮೂಲಕ ಕೋಟಿ ರೂ. ಅನುದಾನ ನೀಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕುರಿತು ಬುಧವಾರ ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಕ್ರಿಕೆಟ್, ಹಾಕಿ, ುಟ್ಬಾಲ್, ವಾಲಿಬಾಲ್ ಸೇರಿ ಇಂಡೋರ್ ಹಾಗೂ ಔಟ್ ಡೋರ್ ಆಟಗಳನ್ನು ಆಡಿಸಲು ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕ್ರೀಡಾಂಗಣ ಕ್ರೀಡಾಪಟುಗಳಿಗೆ ಅನುಕೂಲವಾಗಬೇಕು. ವಿದ್ಯಾರ್ಥಿಗಳು ಹಾಗೂ ಹಿರಿಯರೂ ಅಲ್ಲಿಗೆ ಬಂದು ಕಾಲಕಳೆಯುವಂತೆ ವಾತಾವರಣ ನಿರ್ಮಿಸಬೇಕು. ಬೇರೆ ಬೇರೆ ತಾಲೂಕುಗಳು ಜನ ಇಂಡಿ ಕ್ರೀಡಾಂಗಣ ನೋಡಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವಂತೆ ಮಾದರಿ ಕ್ರೀಡಾಂಗಣ ಮಾಡಲು ಸೂಚಿಸಿದರು.

ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಗಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ತಾಲೂಕು ಪಂಚಾಯಿತಿ ಇಒ ನಂದೀಪ್ ರಾಠೋಡ, ತಾಲೂಕು ಕ್ರೀಡಾಧಿಕಾರಿ ಸಿ.ಎಸ್. ವಾಲಿಕಾರ, ಬಿಇಒ ಟಿ.ಎಸ್. ಆಲಗೂರ, ಶಹರ ಠಾಣೆ ಸಿಪಿಐ ಪ್ರದೀಪ್ ಭಿಸೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net