ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಸುಸೂತ್ರ

15Harugeri1
Published on

ಹಾರೂಗೇರಿ: ತಮಿಳನಾಡಿನ ದಿಂಡಿಗಲ್ಲನಲ್ಲಿ ಜರುಗಲಿರುವ 46ನೇ ಜೂನಿಯರ್ 19 ವರ್ಷದೊಳಗಿನ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡೆಗೆ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಪಟ್ಟಣದ ಅಭಾಜಿ ಕ್ರೀಡಾಂಗಣದಲ್ಲಿ ಜರುಗಿತು.

ಕೊಡಗು, ಬೆಳಗಾವಿ, ಮಂಡ್ಯ, ಮೈಸೂರು, ಗುಲ್ಬರ್ಗ, ಬೆಂಗಳೂರು, ಬಾಗಲಕೋಟೆ ಹೀಗೆ ಮುಂತಾದ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಹ್ಯಾಂಡ್‌ಬಾಲ್ ಅಸೋಸಿಯೇಶನ್ ಕರ್ನಾಟಕ ಹಾರೂಗೇರಿ ವತಿಯಿಂದ ಕ್ರೀಡೆ ಆಯೋಜಿಸಿದ್ದರು.

ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಎಲ್.ಎಸ್.ಜಂಬಗಿ, ಕಾರ್ಯದರ್ಶಿ ಮಾರುತಿ ಪೂಜೇರಿ, ಲಕ್ಕಪ್ಪ ಧರ್ಮಟ್ಟಿ, ಭರತೇಶ ನಾಗನೂರ, ಮಹಾಂತೇಶ ಅರಕೇರಿ, ಗೋಪಾಲ ಧರ್ಮಟ್ಟಿ, ಮಾರುತಿ ಕರ್ಣವಾಡಿ, ರಾಮು ಕಂಬಾರ, ಬಸವರಾಜ ನಾಯಿಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net