ಕ್ರೀಡಾಪಟು ಕುಸಮಾಗೆ ಗ್ರಾಪಂನಿಂದ ಆರ್ಥಿಕ ಭರವಸೆ

nrp congr
ಕಾನೂರು ಗ್ರಾಪಂ ಮೇಲಿನ ಗುಡ್ಡೇಹಳ್ಳದ ಕ್ರೀಡಾಪಟು ಕುಸುಮಾಳನ್ನು ಗ್ರಾಪಂನಿಂದ ಸನ್ಮಾನಿಸಲಾಯಿತು. ರತ್ನಾಕರ್, ಶಿವಮೂರ್ತಿ ಭಟ್, ವಿಶಾಂತಿ ಡಿ. ಸೋಜಾ, ವಿಜಯಕುಮಾರ್, ಕೆ.ಬಿ.ಲೋಕೇಶ್ ಇದ್ದರು.
Published on

ಎನ್.ಆರ್.ಪುರ: ಥ್ರೋಬಾಲ್‌ನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಮೇಲಿನ ಗುಡ್ಡೇಹಳ್ಳದ ಕುಸುಮಾಳ ಕ್ರೀಡಾ ಸಾಧನೆಗೆ ಕಾನೂರು ಗ್ರಾಮ ಪಂಚಾಯಿತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ರತ್ನಾಕರ್ ಭರವಸೆ ನೀಡಿದರು.

ಗ್ರಾಪಂಯಿಂದ ಸಂಕ್ಸೆ ಗ್ರಾಮದ ಮೇಲಿನ ಗುಡ್ಡೇಹಳ್ಳದ ಕ್ರೀಡಾಪಟು ಕುಸುಮಾಳನ್ನು ಮನೆಯಲ್ಲಿ ಸನ್ಮಾನಿಸಿ ಮಾತನಾಡಿ, 9ನೇ ತರಗತಿ ವಿದ್ಯಾರ್ಥಿನಿ ಕುಸುಮಾ ರಾಷ್ಟ್ರ ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ರಾಜ್ಯದ ತಂಡದ ಉಪ ನಾಯಕಿಯಾಗಿದ್ದಳು. ರಾಜ್ಯ ತಂಡ ಪ್ರಥಮ ಸ್ಥಾನ ಪಡೆದಿರುವುದು ಕಾನೂರು ಗ್ರಾಪಂಗೆ ಹೆಮ್ಮೆ ತಂದಿದೆ. ಗ್ರಾಪಂ ಆದಾಯದಲ್ಲಿ ಶೇ.2ರಷ್ಟು ಕ್ರೀಡೆಗೆ ನೀಡಲು ಅವಕಾಶ ಇರುವುದರಿಂದ ಕುಸಮಾಳಿಗೆ ಮುಂದಿನ ದಿನಗಳಲ್ಲಿ ಆರ್ಥಿಕ ಸಹಾಯ ನೀಡುತ್ತೇವೆ ಎಂದರು.

ಸಂಕ್ಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಆರ್.ನಾಗರಾಜ್ ಮಾತನಾಡಿ, ಗ್ರಾಮೀಣ ಭಾಗದ ಕುಸಮಾ ಸಾಧನೆ ರಾಜ್ಯಕ್ಕೆ ಹೆಮ್ಮೆಯಾಗಿದೆ. ಸರ್ಕಾರ ಕುಸಮಾಳಿಗೆ ತರಬೇತಿ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡುತ್ತಾಳೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಶಿವಮೂರ್ತಿ ಭಟ್, ವಿಶಾಂತಿ ಡಿ. ಸೋಜ, ವಿಜಯಕುಮಾರ್, ಪಿಡಿಒ ಕೆ.ಬಿ.ಲೋಕೇಶ್, ಕುಸಮಾ ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net