ಕ್ರೀಡಾಕೂಟದಿಂದ ವೈಮನಸ್ಸು ಮಾಯ

h6-KMCRI Sports 2
Published on

ಹುಕ್ಕೇರಿ: ನ್ಯಾಯಾಲಯದ ಪ್ರಕರಣಗಳಲ್ಲಿ ಉಂಟಾದ ವೈಮನಸ್ಸುಗಳನ್ನು ಮರೆಯಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಹೇಳಿದರು. ಪಟ್ಟಣ ಹೊರ ವಲಯದ ತಾಲೂಕು ಕ್ರೀಡಾಂಗಣದಲ್ಲಿ ರಾಯಲ್ ಲಾಯರ್ಸ್‌ ಹುಕ್ಕೇರಿ ಇವರ ಆಶ್ರಯದಲ್ಲಿ ಭಾನುವಾರ ಜರುಗಿದ ಅಡ್ವೋಕೇಟ್ಸ್ ಪ್ರೀಮಿಯರ್ ಲೀಗ್-2024 ರಾಜ್ಯಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಅವಜಿಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ, ಕೆಲಸದಲ್ಲಿ ಕ್ರಿಯಾಶೀಲತೆ ಬೆಳೆಸಲು ಆಗಾಗ ಇಂತಹ ಕ್ರೀಡೆಗಳನ್ನು ಆಯೋಜಿಸಬೇಕು ಎಂದರು. ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಶಾರೀರಕ ಕ್ಷಮತೆಗೆ ಕ್ರೀಡೆಗಳು ಸಹಕಾರಿಯಾಗಿವೆ.

ಮುಂಬರುವ ದಿನಗಳಲ್ಲಿ ತಾಲೂಕಾಡಳಿತ, ವಕೀಲರು ಮತ್ತು ಯುವಕರ ನಡುವೆ ಸ್ಪರ್ಧೆ ಆಯೋಜಿಸಲಾಗುವುದು ಎಂದರು. ವಕೀಲರ ಸಂಘದ ಅಧ್ಯಕ್ಷ ಅನೀಸ್ ವಂಟಮೂರಿ ಮಾತನಾಡಿದರು.

ಸಿಪಿಐ ಮಹಾಂತೇಶ ಬಸ್ಸಾಪೂರೆ, ಹಿರಿಯ ವಕೀಲ ಪಿ.ಆರ್.ಚೌಗಲಾ, ಎಪಿಪಿ ಅನಿಲ ಕರೋಶಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆಶೀಸ್ ಮಗದುಮ್ಮ, ವಕೀಲರಾದ ರಾಜೇಂದ್ರ ಚೌಗಲಾ, ಕೆ.ಎಲ್.ಜಿನರಾಳಿ, ಎಂ.ಕೆ.ಪಾಟೀಲ, ಡಿ.ಕೆ.ಅವರಗೋಳ, ಬಿ.ಕೆ.ಮಗೆಣ್ಣವರ, ಬಿ.ಎಂ.ಜಿನರಾಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net