ಕ್ರೀಡಾಕೂಟದಲ್ಲಿ ಹಾಸನ ಕಾಲೇಜು ವಿದ್ಯಾರ್ಥಿಗಳ ಸಾಧನೆ

11ark4
ಅರಕಲಗೂಡಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ಹಾಸನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳೊಂದಿಗೆ ಬಿ.ಕೆ. ಗಂಗಾಧರ್, ಪಿ. ನವೀನ್, ಉಪನ್ಯಾಸಕರು ಇದ್ದರು.
Published on

ಅರಕಲಗೂಡು: ಪಟ್ಟಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಾಸನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಗಳಿಸಿದ್ದಾರೆ.

1500 ಮೀ. ಓಟ ಸ್ಪರ್ಧೆಯಲ್ಲಿ ಮಿಥುನ್ (ದ್ವಿತೀಯ), 200 ಮೀ, 800 ಮೀ. (ಪ್ರಥಮ), 100 ಮೀ. ಹುಜೈಫಾ(ಪ್ರಥಮ), ಗುಂಡು ಎಸೆತ (ದ್ವಿತೀಯ), 4400 ಮೀ. ರಿಲೆ (ದ್ವಿತೀಯ), 4100 ಮೀ. ರಿಲೆಯಲ್ಲಿ ಯಶವಂತ್, ಪುನೀತ್, ತೊಶಿತ್, ಅವೇಜ್, 200 ಮೀ ಓಟದಲ್ಲಿ ಪ್ರಫುಲ್ ಚಂದ್(ಪ್ರಥಮ), 200 ಮೀ. ಓಟದಲ್ಲಿ ಯಶವಂತ್(ದ್ವಿತೀಯ), 400 ಮೀ. ಓಟದಲ್ಲಿ (ತೃತೀಯ), ಎತ್ತರ ಜಿಗಿತ ಬಾಲಕರ ವಿಭಾಗದಲ್ಲಿ ಪುನೀತ್ (ಪ್ರಥಮ), ಬಾಲಕಿಯರ ವಿಭಾಗದಲ್ಲಿ ಸಿಂಚನ(ಪ್ರಥಮ), ಉದ್ದ ಜಿಗಿತ ಸ್ಪರ್ಧೆಯಲ್ಲಿ ಸಿಂಚನ ( ದ್ವಿತೀಯ), ಟೆನಿಕಾಯ್ಟ ಸ್ಪರ್ಧೆಯಲ್ಲಿ ರಕ್ಷಿತಗೌಡ(ದ್ವಿತೀಯ), 400 ಮೀ. ಓಟ ಬಾಲಕಿಯರ ವಿಭಾಗದಲ್ಲಿ ಮಾನ್ಯ(ಪ್ರಥಮ), ಗುಂಪು ಕ್ರೀಡಾಕೂಟದಲ್ಲಿ ಬಾಲ್ ಬ್ಯಾಡ್ಮಿಂಟನ್ ತಂಡ (ಪ್ರಥಮ), ವಾಲಿಬಾಲ್ ತಂಡ (ದ್ವಿತೀಯ) ಸ್ಥಾನ ಪಡೆದು ಬಹುಮಾನ ಪಡೆದಿದ್ದಾರೆ.

ಕಾಲೇಜು ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಪ್ರಾಂಶುಪಾಲ ನವೀನ್ ಮತ್ತು ಉಪನ್ಯಾಸಕರು ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net