ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

17 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕುಸ್ತಿ ಸ್ಪರ್ಧೆ ಹಾಗೂ ಧಾರವಾಡ ತಾಲೂಕು ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದ ಭಾರತ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕುಸ್ತಿ ಸ್ಪರ್ಧೆಯಲ್ಲಿ 38 ಕೆಜಿ ವಿಭಾಗದಲ್ಲಿ ಭಜರಂಗ ದೊಡ್ಡಮನಿ, 39 ಕೆಜಿ ವಿಭಾಗದಲ್ಲಿ ಜಾನ್ವಿ ಕೆ, 45 ಕೆಜಿ ವಿಭಾಗದಲ್ಲಿ ಯಂಕಪ್ಪ ಕೂಡಗಿ, 60 ಕೆಜಿ ವಿಭಾಗದಲ್ಲಿ ಲಕ್ಷ್ಮಣ ಗೌಡರ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ 57 ಕೆಜಿ ವಿಭಾಗದಲ್ಲಿ ದಾದಾಪೀರ ಸೈಯ್ಯದನವರ, 48 ಕೆಜಿ ವಿಭಾಗದಲ್ಲಿ ಶಿವಾಜಿ ಗಾಯಕವಾಡ ದ್ವಿತೀಯ ಸ್ಥಾನ ಪಡೆದಿದ್ದರೆ, 41 ಕೆಜಿ ವಿಭಾಗದಲ್ಲಿ ಮಾದೇಶ ಬಟ್ಟೆ, 44 ಕೆಜಿ ವಿಭಾಗದಲ್ಲಿ ಸುದೀಪ ನೇಸರಿಗೆ, 52 ಕೆಜಿ ವಿಭಾಗದಲ್ಲಿ ಚೇತನ ತುಕೋಜಿ, 75 ಕೆಜಿ ವಿಭಾಗದಲ್ಲಿ ಬಾಬುಸಾಬ್ ಮಾಣೆ, 51 ಕೆಜಿ ವಿಭಾಗದಲ್ಲಿ ಆದಮ್ ಸಾಬ್ ಗಲಗಲಿ, 45 ಕೆಜಿ ವಿಭಾಗದಲ್ಲಿ ಹನುಮಂತ ಎಲ್, 73 ಕೆಜಿ ವಿಭಾಗದಲ್ಲಿ ಶ್ರೇಯಾ ಜಾಧವ ತೃತೀಯ ಸ್ಥಾನ ಪಡೆದಿದ್ದಾರೆ.
ಧಾರವಾಡ ಶಹರ (ತಾಲೂಕು) ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 3000 ಮೀ. ಓಟದಲ್ಲಿ ದೀಪಾ ಘಾಟಗೆ, ಸರಪಳಿ ಗುಂಡು ಎಸೆತದಲ್ಲಿ ಶ್ರೇಯಾ ಜಾಧವ, ಚೇತನ ತು ಕ್ಕೋಜಿ ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಸರಪಳಿ ಗುಂಡು ಎಸೆತದಲ್ಲಿ ಸುಶೀಲಕುಮಾರ ಘೋರ್ಪಡೆ ತೃತೀಯ ಹಾಗೂ 3000 ಮೀ. ಓಟದಲ್ಲಿ ಬಸವಣ್ಣೆವ್ವ ಕುರುವಿನಕೊಪ್ಪ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮರಾಠ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ, ಪದಾಧಿಕಾರಿಗಳು, ಭಾರತ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಬಿ.ಬಾಬರ, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net