ಕ್ರೀಡಾ ಮನೋಭಾವದೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ

PH 09
Published on

ಕಮಲಾಪುರ: ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುತ್ತವೆ. ತೀರ್ಪುಗಾರರು ಪಾರದರ್ಶಕ ಕಾಪಾಡಿಕೊಂಡರೆ ಮಾತ್ರ ರಿಯಲ್ ಪ್ರತಿಭೆ ಹೊರಬರಲು ಸಾಧ್ಯ ಎಂದು ಬಿಆರ್‌ಸಿ ಡಾ.ಶಾಂತಾಬಾಯಿ ಬಿರಾದಾರ್ ಹೇಳಿದರು.

ಮಹಾಗಾಂವ್ ಕ್ರಾಸ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾಗಾಂವ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಹಜ. ಕ್ರೀಡಾ ಮನೋಭಾವ ಅಳವಡಿಸಿಕೊಳ್ಳಬೇಕು. ನಿರಂತರ ಪರಿಶ್ರಮವಿದ್ದಾಗ ಸಾಧನೆ ಸಾಧ್ಯವಾಗಲಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಶಿಕ್ಷಣ ಸಂಯೋಜಕ ಅರ್ಜುನ ಹತ್ತಿ ಮಾತನಾಡಿದರು. ಮುಖ್ಯಗುರು ಸುರೇಖಾ ಹೊನ್ನಾಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ಶಿವಲಿಂಗಯ್ಯ ಕಳ್ಳಿಮಠ, ಮಲ್ಲಿಕಾರ್ಜುನ ಮರತೂರಕರ, ಸಿದ್ದಲಿಂಗ ದಿಗ್ಗಾಂವ್, ರಾಜೇಶ್ವರಿ, ಶಾಂತಾಬಾಯಿ ಚೇಂಗಟಾ, ಸಂಗೀತಾ, ಸಾಯಿಬಣ್ಣ ಇತರರಿದ್ದರು. ರಾಗಿಣಿ ಪ್ರಾಸ್ತಾವಿಕ ಮಾತನಾಡಿದರು. ಅಂಬಾರಾಯ ಮಡ್ಡೆ ನಿರೂಪಣೆ ಮಾಡಿದರು. ಪ್ರಿಯಾಂಕಾ ಸ್ವಾಗತಿಸಿದರು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಭು ನಾಯಕ, ನಿವೃತ್ತ ಶಿಕ್ಷಕರಾದ ವಿರೇಂದ್ರ ಕಲ್ಯಾಣ, ವಾಹೇದ್ ಪಟೇಲ್, ಭಾಗ್ಯಲತಾ ಅವರನ್ನು ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net