ಕ್ರೀಡಾ ನಿಯಮ ಪಾಲನೆಯಾಗಲಿ

14..4
ಚಿಕ್ಕೋಡಿ ತಾಲೂಕಿನ ಕೋಥಳಿಯಲ್ಲಿ ಏರ್ಪಡಿಸಿದ್ದ ವಲಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಬಿಇಒ ಬಿ.ಎ.ಮೇಕಣಮರಡಿ, ಶಾಂತಿನಾಥ ತಾರದಾಳೆ, ಎನ್.ಜಿ.ಪಾಟೀಲ,ಎಸ್.ಎ.ಹಿಪ್ಪರಗಿ ಮಹಾವೀರ ಕಾಮಗೌಡ ಇತರರಿದ್ದರು.
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಕ್ರೀಡಾ ನಿಯಮ ಪಾಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಕಾರಿ ಬಿ.ಎ.ಮೇಕಣಮರಡಿ ಹೇಳಿದರು.
ತಾಲೂಕಿನ ಕೋಥಳಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೋಥಳಿ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಾಠದ ಜತೆಗೆ ಆಟದಲ್ಲಿಯೂ ಭಾಗವಹಿಸುವಂತೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ತಿಳಿಸಿದರು.
ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಜಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿರಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ಕುಂಬಾರ, ದೇಶಭೂಷಣ ಶ್ರಮ ಟ್ರಸ್ಟ್ ಕಾರ್ಯದರ್ಶಿ ಶಾಂತಿನಾಥ ತಾರದಾಳೆ, ಮಹಾವೀರ ಕಾಮಗೌಡ, ಸುಕುಮಾರ ಪೀಟಕೆ, ಕಿರಣ ಖೋತ, ಸವಿತಾ ದೋತರೆ, ಎಸ್.ಎಸ್.ರಾಜಗೌಡರ ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ಅಕಾರಿ
ಎಸ್.ಎ.ಹಿಪ್ಪರಗಿ ಸ್ವಾಗತಿಸಿದರು. ಎಸ್.ಎ.ವಾಲಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net