ಕ್ರೀಡಾ ತರಬೇತಿ ಶಿಬಿರಕ್ಕೆ ಚಾಲನೆ

11.npk--1
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರಿಯನ್ಸ್ ಹಾಕಿ ಕೋಚಿಂಗ್ ಕ್ಯಾಂಪ್ ವತಿಯಿಂದ ಆಯೋಜಿಸಿರುವ ಉಚಿತ ಕ್ರೀಡಾ ತರಬೇತಿ ಶಿಬಿರವನ್ನು ಮಂಗಳವಾರ ಪೇರೂರು ಪ್ರಾಥಮಿಕ ಶಾಲಾ ಮೈದಾನದಲ್ಲಿ ಉದ್ಘಾಟಿಸಲಾಯಿತು.


ಕೋಚಿಂಗ್ ಕ್ಯಾಂಪ್ ಅಧ್ಯಕ್ಷ ಮೊವೇರ ಪಟ್ಟು ತಮ್ಮಯ್ಯ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಮಂಡಲ ಮಾಜಿ ಪ್ರಧಾನ ಮೂವೇರ ನಾಣಪ್ಪ, ಮಾಜಿ ಸೈನಿಕ ತಾಪಂದ ಅಪ್ಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಚ್ಚೂರ ರವೀಂದ್ರ, ಚೋಕಿರ ಬಾಬಿ ಬೀಮಯ್ಯ, ಚಂಗೇಟ್ಟಿರ ಕುಮಾರ್ ಸೋಮಣ್ಣ, ಪಾಲಯಾಡ ಸಂತೋಷ ದೇವಯ್ಯ, ಅಯ್ಯಪ್ಪ, ತರಬೇತುದಾರ ಕುಮ್ಮಂಡ ವಿಠಲ ಇತರರಿದ್ದರು.

18 ವರ್ಷದೊಳಗಿನವರಿಗೆ ಏ.28ರವರೆಗೆ ಪೇರೂರು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬೆಳಗ್ಗೆ 6.30 ರಿಂದ 9 ಗಂಟೆವರೆಗೆ ತರಬೇತಿ ನೀಡಲಾಗುವುದು. ಈ ಸಂದರ್ಭ ಉಚಿತ ಫಲಹಾರ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net