ಕ್ರೀಡಾ ಚಟುವಟಿಕೆಯಿಂದ ಏಕಾಗ್ರತೆ ಹೆಚ್ಚಳ

9..3
ಕೊಕಟನೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಉದ್ಘಾಟಿಸಿದರು. ಸಿದ್ಧಪ್ಪ ಮುದಕಣ್ಣವರ, ಗುರುಮೂರ್ತಯ್ಯ ಕಾಡದೇವರಮಠ, ಶಾನವ್ವ ಪೂಜಾರಿ, ರಸೂಲ್ ನದಾಫ್ ಇತರರಿದ್ದರು.
Published on

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಮನೋದೈಹಿಕವಾಗಿ ಸದೃಢವಾಗಿರಲು ಪಠ್ಯದ ಜತೆಗೆ ಕ್ರೀಡೆಯಲ್ಲೂ ಸಕ್ರಿಯರಾಗಿರಬೇಕು ಎಂದು ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಹೇಳಿದರು.


ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಳವಾಡ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕೊಕಟನೂರ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾಮನೋಭಾವ ಹೆಚ್ಚಿಸಲು ಕ್ರೀಡೆಗಳು ಸಹಕಾರಿ ಎಂದರು.


ಜಿಪಂ ಮಾಜಿ ಸದಸ್ಯ ಸಿದ್ಧಪ್ಪ ಮುದಕಣ್ಣವರ ಮಾತನಾಡಿದರು. ಮುಖಂಡ ಸಂಬಾಜಿ ಐನಾಪುರ ಕ್ರೀಡಾಜ್ಯೋತಿ ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇಮೂ ಗುರುಮೂರ್ತಯ್ಯ ಕಾಡದೇವರಮಠ, ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ, ಉಪಾಧ್ಯಕ್ಷ ಅರ್ಜುನ ಪೂಜಾರಿ, ಮಹಾದೇವ ಪಾಟೀಲ, ರಸೂಲ್ ನದಾಫ್, ಮಲ್ಲಿಕಾರ್ಜುನ ಅರೋಲಿ, ಭೀಮಪ್ಪ ಜನವಾಡ, ಉಪಪ್ರಾಚಾರ್ಯ ಅನಿಲ ಮೇಲಿನಕೇರಿ, ಮುಖ್ಯೋಪಾಧ್ಯಾಯ ಸಿದರಾಯ ಕಾಂಬಳೆ, ರೇವಣೇಶ ಹಿರೇಮಠ, ಸದಾಶಿವ ಮುದಕಣ್ಣವರ, ಚಿದಾನಂದ ಕಾಂಬಳೆ, ಮಹಾದೇವ ಚವ್ಹಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net