ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ

20blrp5
ಬೇಲೂರು ತಾಲೂಕು ವಾಲಿಬಾಲ್ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಲಾಯಿತು. ಬಿ.ಎಂ.ಸಂತೋಷ್, ಬಾಬುಪ್ರಸಾದ್, ಆನಂದ್, ಲಕ್ಷ್ಮಣ್ ಇತರರು ಇದ್ದರು.
Published on

ಬೇಲೂರು: ವಾಲಿಬಾಲ್‌ನೊಂದಿಗೆ ಇತರ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವುದಕ್ಕೆ ನಮ್ಮ ವಾಲಿಬಾಲ್ ಸಂಸ್ಥೆ ಮುಂದಾಗಲಿದೆ ಎಂದು ತಾಲೂಕು ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಬಿ.ಎಂ.ಸಂತೋಷ್ ಹೇಳಿದರು.

ಪಟ್ಟಣದ ಚನ್ನಕೇಶವೇಗೌಡ ಕಲ್ಯಾಣ ಮಂಟಪದ ಕಚೇರಿಯಲ್ಲಿ ಭಾನುವಾರ ಬೇಲೂರು ತಾಲೂಕು ವಾಲಿಬಾಲ್ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಿಂದ ತಾಲೂಕಿನಲ್ಲಿರುವ ವಾಲಿಬಾಲ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದರೊಂದಿಗೆ, ಗ್ರಾಮೀಣ ಕ್ರೀಡೆಗಳಿಗೂ ಒತ್ತು ನೀಡಲಾಗುವುದು ಎಂದರು.

ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾಬುಪ್ರಸಾದ್ ಮಾತನಾಡಿ, ಕ್ರೀಡೆ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಮೊದಲು ಅರಿವು ಮೂಡಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಪ್ರಥಮ ಹಂತದಲ್ಲಿ ಯಾವ ರೀತಿ ಭಾಗವಹಿಸಬೇಕು, ಯಾವ ರೀತಿ ಮುಂದೆ ಸಾಗಿದರೆ ಗುರಿ ಮುಟ್ಟಲು ಸಾಧ್ಯ ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಸಂಸ್ಥೆ ಕಾರ್ಯಾಧ್ಯಕ್ಷ ಆನಂದ್, ಖಜಾಂಚಿ ಲಕ್ಷ್ಮಣ್, ಉಪಾಧ್ಯಕ್ಷ ಆರ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾದ ಲೋಹಿತ್, ಪವನ್ ಕುಮಾರ್, ಶ್ರೇಯಸ್, ಸಂತೋಷ್, ನಿರ್ದೇಶಕರಾದ ಕಾವ್ಯಾ, ಸೌಮ್ಯಾ, ಪ್ರಸನ್ನ, ಶ್ರೇಯಸ್, ಪಲ್ಲವಿ ಪವನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net