ಕ್ರೀಡಾಕೂಟದಲ್ಲಿ ಗಿರಿಯಪ್ಪ ಸಾಧನೆ

23nlg_1
Published on

ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಮದ 70 ವರ್ಷದ ಗಿರಿಯಪ್ಪ ಗೊಣ್ಣಾಗರ ಅವರು ಗುಜರಾತಿನ ವಡೋದರಾದಲ್ಲಿ ಫೆ. 5ರಿಂದ 9ರವರೆಗೆ ಜರá-ಗಿದ 3ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 70 ವಯೋಮಾನದ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದು, 5,000 ಮೀ. ಓಟದಲ್ಲಿ ದ್ವಿತೀಯ, 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಮತ್ತು ಪ್ರಶಸ್ತಿ ಪ್ರಮಾಣಪತ್ರ ಪಡೆದಿದ್ದಾರೆ. ಗಿರಿಯಪ್ಪ ಅವರು 64ನೇ ವಯಸ್ಸಿನಲ್ಲಿ ಹಿರಿಯರ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಅಭಿರುಚಿ ಬೆಳೆಸಿಕೊಂಡಿದ್ದು, ತಮಿಳುನಾಡಿನ ಕೊಯಿಮತ್ತೂರ, ಮಂಗಳೂರು, ಮೈಸೂರು, ಬೆಂಗಳೂರು ತುಮಕೂರು ಜಿಲ್ಲೆಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಇನ್ನು ವಿದೇಶಗಳಲ್ಲಿ ನಡೆಯುವ ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net