ಕ್ರೀಡಾಂಗಣ ಸರಿಪಡಿಸಲು ಮನವಿ

11 RON 1 A
Published on

ರೋಣ: ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದ ತುಂಬ ಕಸ ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಇದನ್ನು ಸರಿಪಡಿಸಲು ಆಗ್ರಹಿಸಿ ಪಟ್ಟಣದ ಕ್ರೀಡಾಪಟುಗಳು ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ರೋಣ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ ಅಭಿಷೇಕ ನವಲಗುಂದ ಮಾತನಾಡಿ, ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದ ತುಂಬೆಲ್ಲ ಕಸ ಬೆಳೆದು ವಾಯುವಿಹಾರಿಗಳಿಗೆ ತೊಂದರೆಯಾಗಿದೆ. ಪಟ್ಟಣದಲ್ಲಿರುವ ಏಕೈಕ ಕ್ರೀಡಾಂಗಣ ಇದಾಗಿದ್ದು, ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ನೂರಾರು ನಾಗರಿಕರು ವಾಯು ವಿಹಾರಕ್ಕೆ ಕ್ರೀಡಾಂಗಣಕ್ಕೆ ಬರುತ್ತಾರೆ. ಇತ್ತೀಚೆಗೆ ನಸುಕಿನ ವೇಳೆ ವಾಯು ವಿಹಾರಕ್ಕೆ ಬಂದ ನಾಗರಿಕರಿಗೊಬ್ಬರಿಗೆ ಕಸದಲ್ಲಿರುವ ಹಾವು ಕಚ್ಚಿದ ಕಾರಣ ಭಯಪಟ್ಟು ಬಹುತೇಕರು ಕ್ರೀಡಾಂಗಣದತ್ತ ಬರುತ್ತಿಲ್ಲ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ನಾಗಪ್ಪ ದೇಶಣ್ಣವರ, ಯಲ್ಲಪ್ಪ ಸುಂಕದ, ಗಂಗಾಧರ ಗಡಗಿ, ವಿಶ್ವನಾಥ ಗಡಗಿ, ಯಲ್ಲಪ್ಪ ಕಿರೇಸೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net