ಕ್ರಿಶ್ಚಿಯನ್ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ

11 ckm 8
ಚಿಕ್ಕಮಗಳೂರಿನ ತಮಿಳು ಕಾಲನಿಯ ಕೇಶವಿನ ಪ್ರಾರ್ಥನ ಮಂದಿರದಲ್ಲಿ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಪದಗ್ರಹಣ ಸಮಾರಂಭ ನೆರವೇರಿತು.
Published on

ಚಿಕ್ಕಮಗಳೂರು: ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಪದಗ್ರಹಣ ಸಮಾರಂಭ ತಮಿಳು ಕಾಲನಿಯ ಕೇಶವಿನ ಪ್ರಾರ್ಥನ ಮಂದಿರದಲ್ಲಿ ನಡೆದು, ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ಶ್ರೀಧರ್ ಸಾಮೂವೆಲ್ ಅವರ ನೇತೃತ್ವದಲ್ಲಿ ಜಿಲ್ಲೆ ಯುವ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ದಿವಾಕರ್ ಎಚ್.ಎಸ್, ಉಪಾಧ್ಯಕ್ಷ ಸಿ.ಕೆ.ಅರವಿಂದ್, ಕಾರ್ಯದರ್ಶಿ ಎನ್.ಪ್ರಕಾಶ್, ಸಹ ಕಾರ್ಯದರ್ಶಿ ಮನೋಜ್, ಖಜಾಂಚಿ ಲೋಹಿತ್, ಸಂಘಟನಾ ಕಾರ್ಯದರ್ಶಿ ರವಿ, ಸಂಚಾಲಕರಾಗಿ ಮೋಹನ್.ಆರ್ ಅವರನ್ನು ನೇಮಕ ಮಾಡಲಾಗಿದೆ.

ಈ ವೇಳೆ ರಾಜ್ಯ ಉಪಾಧ್ಯಕ್ಷ ಜೋಸೆಫ್ ಮಾತನಾಡಿ, ಜಿಲ್ಲಾಧ್ಯಂತ ಸಂಘಟನೆಯನ್ನು ಬಲಪಡಿಸಿ ಉತ್ತಮ ಕಾರ್ಯಗಳನ್ನು ಸಮುದಾಯಕ್ಕೂ, ಸಮಾಜಕ್ಕೂ ಮಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರಾದ ರಮೇಶ್ ಫ್ರಾನ್ಸಿಸ್, ಸಂತೋಷ್ ಜಾರ್ಜ್, ಜಿಲ್ಲಾ ಉಪಾಧ್ಯಕ್ಷ ಮೋಸೆಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್, ಸಹ ಕಾರ್ಯದರ್ಶಿ ಚಂದ್ರು, ಖಜಾಂಚಿ ವಿಜಯ್, ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಲಲಿತ, ಸಹ ಕಾರ್ಯದರ್ಶಿ ಯಶೋಧ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net