ಕ್ರಿಮ್ಸ್​ಗೆ ಕೋವಿಡ್ ಕಾರ್ಟ್ ಯಂತ್ರ

12KWR4
Published on

ಕಾರವಾರ: ದೂರದಿಂದಲೇ ಕೋವಿಡ್ ರೋಗಿಗಳ ತಪಾಸಣೆ ಮಾಡಿ, ಚಿಕಿತ್ಸೆಯ ಸಲಹೆ ನೀಡಬಹುದಾದ ಅತ್ಯಾಧುನಿಕ ಕೋವಿಡ್ ಕಾರ್ಟ್ ಯಂತ್ರ ಇಲ್ಲಿನ ಕ್ರಿಮ್್ಸ ಆಸ್ಪತ್ರೆಗೆ ಲಭ್ಯವಾಗಿದೆ.

ಟೆಲ್ಸನ್ ಕಂಪನಿ ಸಾರ್ವಜನಿಕ ಜವಾಬ್ದಾರಿ ನಿಧಿಯಲ್ಲಿ ಇಂಜಿನಿಯರ್ ಹರ್ಷ ಮೂರೂರು ಅವರು ವಿಶೇಷ ಆಸಕ್ತಿಯಿಂದ ಈ ಯಂತ್ರವನ್ನು ಕ್ರಿಮ್ಸ್​ಗೆ ಒದಗಿಸಿಕೊಟ್ಟಿದ್ದಾರೆ. ಹರ್ಷ ಅವರು ಸೋಮವಾರ ಆಸ್ಪತ್ರೆಯಲ್ಲಿ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಈ ಯಂತ್ರವು ಟೆಲಿ ಮೆಡಿಸಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ತಜ್ಞ ವೈದ್ಯರು ದೂರದಲ್ಲಿ ಕುಳಿತೇ ಕೋವಿಡ್ ವಾರ್ಡ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಅಥವಾ ಡ್ಯೂಟಿ ಡಾಕ್ಟರ್ ಸಹಾಯದಿಂದ ರೋಗಿಗಳ ಹೃದಯ ಬಡಿತ ಹಾಗೂ ಇತರ ವಿವರ ಪಡೆದು ಅವರಿಗೆ ಚಿಕಿತ್ಸೆಗೆ ಸೂಚಿಸಬಹುದಾಗಿದೆ.

109 ಜನರಿಗೆ ಕರೊನಾ
ಜಿಲ್ಲೆಯ 109 ಜನರಿಗೆ ಸೋಮವಾರ ಕರೊನಾ ಪತ್ತೆಯಾಗಿದೆ. 162 ಜನ ಗುಣ ಹೊಂದಿದ್ದಾರೆ. 3 ಜನ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 11,306 ಜನ ಕರೊನಾಕ್ಕೆ ಒಳಗಾಗಿದ್ದು, 9859 ಜನ ಗುಣವಾಗಿದ್ದಾರೆ. 138ಜನ ಮೃತಪಟ್ಟಿದ್ದಾರೆ. 1309 ಸಕ್ರಿಯ ಪ್ರಕರಣಗಳಿವೆ.

ಸೋಮವಾರದ ವರದಿಯಂತೆ ಕಾರವಾರದಲ್ಲಿ 6, ಅಂಕೋಲಾದಲ್ಲಿ 10, ಕುಮಟಾದಲ್ಲಿ 9, ಹೊನ್ನಾವರದಲ್ಲಿ 4, ಶಿರಸಿಯಲ್ಲಿ 11, ಸಿದ್ದಾಪುರದಲ್ಲಿ 22, ಮುಂಡಗೋಡಿನಲ್ಲಿ 4, ಹಳಿಯಾಳದಲ್ಲಿ 18, ಜೊಯಿಡಾದಲ್ಲಿ 25 ಜನರಿಗೆ ಕೋವಿಡ್ ಖಚಿತವಾಗಿದೆ. ಕಾರವಾರದಲ್ಲಿ 34, ಅಂಕೋಲಾ ಮತ್ತು ಜೊಯಿಡಾದಲ್ಲಿ ತಲಾ 1, ಕುಮಟಾದಲ್ಲಿ 66, ಹೊನ್ನಾವರದಲ್ಲಿ 7, ಭಟ್ಕಳದಲ್ಲಿ 10, ಶಿರಸಿಯಲ್ಲಿ 29, ಸಿದ್ದಾಪುರದಲ್ಲಿ 14 ಜನರು ಕರೊನಾದಿಂದ ಗುಣವಾಗಿದ್ದಾರೆ. ಕಾರವಾರ, ಹೊನ್ನಾವರ, ಯಲ್ಲಾಪುರದ ತಲಾ ಒಬ್ಬರು ಕರೊನಾದಿಂದ ಮೃತಪಟ್ಟಿದ್ದಾರೆ ಎಂದು ಸೋಮವಾರದ ಬುಲೆಟಿನ್ ಹೇಳಿದೆ. ದಾಂಡೇಲಿ ಹಾಗೂ ಶಿರಸಿಯ ಇಬ್ಬರು ವೃದ್ಧರು ಇಲ್ಲಿನ ಕ್ರಿಮ್್ಸ ಆಸ್ಪತ್ರೆಯಲ್ಲಿ ಕರೊನಾಕ್ಕೆ ಬಲಿಯಾಗಿದ್ದು, ಅವರ ವಿವರ ಹೆಲ್ತ್ ಬುಲೆಟಿನ್​ನಲ್ಲಿ ಇನ್ನಷ್ಟೇ ಸೇರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net