ಕ್ರಿಮಿನಾಶಕ ದೇಹ ಸೇರಿ ರೈತ ಸಾವು

farmersuicide-06-1499326418
Published on

ಕಲಬುರಗಿ: ಫರಹತಾಬಾದ್ ಗ್ರಾಮದಲ್ಲಿ ತೊಗರಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವಾಗ ದೇಹಕ್ಕೆ ತಗುಲಿ ರೈತನೊಬ್ಬ ಮೃತಪಟ್ಟಿದ್ದಾನೆ. ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದ ಶರಣಪ್ಪ ತಳವಾರ ಮೃತ ರೈತ. ಫರಹತಾಬಾದ್‌ನ ಚಾಂದಸಾಬ್ ಕುಕನೂರ ಜಮೀನಿನಲ್ಲಿ ದುಡಿಯಲು ಇದ್ದು, ಅ.೨೨ರಂದು ತೊಗರಿಗೆ ಕೀಟನಾಶಕ ಸಿಂಪಡಿಸಿದ ಬಳಿಕ ಕೈ ಕಾಲು ಸರಿಯಾಗಿ ತೊಳೆಯದೆ ಊಟ ಮಾಡಿದ್ದರಿಂದ ಕೀಟನಾಶಕ ದೇಹ ಸೇರಿದೆ. ಕಸಿವಿಸಿ ಆಗುತ್ತಿದೆ ಎಂದು ಪತ್ನಿ ಎದುರು ಹೇಳಿದ ತಕ್ಷಣ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ಪತ್ನಿ ರಾಜಶ್ರೀ ತಳವಾರ ದೂರಿನನ್ವಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net