ಕ್ರಿಮಿನಲ್ ಖಟ್ಲೆ ದಾಖಲಿಸಲು ಆಗ್ರಹ

0108 Surapur 02
ದೇವಾಪುರ ಗ್ರಾಪಂ ಸದಸ್ಯೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಸುರಪುರ ತಹಸಿಲ್ ಕಚೇರಿ ಎದುರು ಮಂಗಳವಾರ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಬಸವರಾಜ ಶೆಳ್ಳಗಿ, ರವೀಂದ್ರ ಬೊಮ್ಮನಹಳ್ಳಿ, ಮಾನು ಗುರಿಕಾರ, ಮಾನಪ್ಪ ಬಿಜಾಸಪುರ ಇತರರಿದ್ದರು.
Published on

ಸುರಪುರ: ದೇವಾಪುರ ಗ್ರಾಪಂಗೆ ಜನಪ್ರತಿನಿಧಿಯಾಗಿ ಆಯ್ಕೆಯಾದರೂ ಅತಿಥಿ ಶಿಕ್ಷಕಿಯಾಗಿ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ಮೋಸ ಮಾಡಿರುವ ಶಿಲ್ಪಾ ಕವಲಿ ವಿರುದ್ಧ ವಂಚನೆ ದೂರು ದಾಖಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.

ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೆ ಮತ್ತೊಂದೆಡೆ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವಂತಿಲ್ಲ. ಆದರೂ ದೇವಾಪುರ ಗ್ರಾಪಂ ಪಿಡಿಒ ಮತ್ತು ಶಾಲೆ ಮುಖ್ಯಶಿಕ್ಷಕರ ಸಹಕಾರದಿಂದ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿ ವಂಚಿಸಿದ್ದಾರೆ ಎಂದು ದೂರಿದರು.

ಗ್ರಾಪಂ ಸದಸ್ಯೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಸಬೇಕು. ಪೊಲೀಸ್ ಮತ್ತು ತಾಲೂಕು ಆಡಳಿತ ಈ ಕೆಲಸ ಮಾಡದಿದ್ದರೆ ಆ.೩ರಂದು ಸುರಪುರ ಡಿವೈಎಸ್‌ಪಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಸಂಚಾಲಕ ಬಸವರಾಜ ಶೆಳ್ಳಗಿ, ರವೀಂದ್ರ ಬೊಮ್ಮನಹಳ್ಳಿ, ಮಾನು ಗುರಿಕಾರ, ಮಾನಪ್ಪ ಬಿಜಾಸಪುರ, ಜಟ್ಟೆಪ್ಪ ನಾಗರಾಳ, ಹಣಮಂತ ಬಾಂಬೆ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ, ಖಾಜಾ ಹುಸೇನ್, ಮರಿಯಪ್ಪ ಕಾಂಗ್ರೆಸ್, ಮುತ್ತುರಾಜ ಹುಲಿಕೇರಿ, ಕಾಳಿಂಗಪ್ಪ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಶೆಳ್ಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net