ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವನ ಬಂಧನ

Oplus_16908288
Oplus_16908288
Published on

ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವನ ಬಂಧನ

ಬೆಳಗಾವಿ:ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ 2 ಲಕ್ಷ ರೂ. ನಗದು ಸೇರಿದಂತೆ ಮೊಬೈಲ್ ಗಳನ್ನ ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಈ ಕ್ರಿಕೆಟ್ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಬೆಳಗಾವಿಯ ಸಿಂಧಿ ಕಾಲೋನಿಯ ಉದ್ದವ್ ದಾಸ್  ಎಂಬುವನನ್ನ ಬಂಧಿಸಲಾಗಿದೆ.ಇನೋರ್ವ ಆರೋಪಿ ಪರಾರಿಯಾಗಿದ್ದಾನೆ.

ಈ ಕುರಿತು ಸೈಬರ್ ಕ್ರೈಂ ( ಸಿಇಎನ್ ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತರಿಂದ ದಂಧೆಗೆ ಬಳಸಲಾದ ಮೊಬೈಲ್ ಪೋನ್,ಸ್ಮಾರ್ಟ್ ಟಿವಿ,ಎರಡು ಲಕ್ಷ ರೂ ನಗದು ಹಣವನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net