ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆಯ ಮೇಲೆ ದಾಳಿ, ಓರ್ವನ ಬಂಧನ

25 IPL Betting 1
Published on

ಬೆಳಗಾವಿ: ನಗರದ ಸಿಂಧಿ ಕಾಲನಿಯಲ್ಲಿ ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ಅಡ್ಡೆ ಮೇಲೆ ಬೆಳಗಾವಿ ಸಿಇಎನ್​ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿ, ಆತನಿಂದ ಮೊಬೈಲ್​, ಸ್ಮಾರ್ಟ್​ ಟಿವಿ ಹಾಗೂ 2 ಲಕ್ಷ ರೂ. ನಗದು ವಶ ಪಡಿಸಿಕೊಂಡಿದ್ದಾರೆ.

ಸಿಂಧಿ ಕಾಲನಿ ನಿವಾಸಿ ಉದ್ದವ ಜಯರಾಮದಾಸ ರೋಚಲಾನಿ(61) ಬಂಧಿತ ವ್ಯಕ್ತಿ. ಮತ್ತೊರ್ವ ಆರೋಪಿ ಕರಣ್​ ರೋಚಲಾನಿ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ದಾಳಿ ವೇಳೆ ಬೆಟ್ಟಿಂಗ್​ ದಂಧೆಗೆ ಬಳಸುತ್ತಿದ್ದ 12 ಐೋನ್​, 13 ಬೇಸಿಕ್​ ಮೊಬೈಲ್​ ,1 ಸ್ಮಾರ್ಟ್​ಟಿವಿ ಮತ್ತು 2 ಲಕ್ಷ ರೂ. ನಗದು ಹಣ ವಶ ಪಡೆಸಿಕೊಂಡಿದ್ದಾರೆ. ಈ ಕುರಿತು ಸೈಬರ್​ ಕೆಂ (ಸಿಇಎನ್​) ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net