ಕ್ರಿಕೆಟ್ ಕ್ಲಬ್ ಯುವ ಪ್ರತಿಭೆಗಳಿಗೆ ಸ್ಫೂರ್ತಿ

19 HANUR 1
ಹನೂರಿನಲ್ಲಿ ತಾಲೂಕು ಕ್ರಿಕೆಟ್ ಕ್ಲಬ್‌ನ್ನು ಶಾಸಕ ಆರ್.ನರೇಂದ್ರ ಉದ್ಘಾಟಿಸಿದರು, ಜವಾದ್ ಆಹಮದ್, ಗಿರೀಶ್, ಮಮ್ತಾಜ್‌ಬಾನು, ಅಭಿಲಾಷ್ ಇತರರು ಇದ್ದರು.
Published on

ಹನೂರು: ತಾಲೂಕು ಕೇಂದ್ರದಲ್ಲಿ ಕ್ರಿಕೆಟ್ ಕ್ಲಬ್ ರಚಿಸಿರುವುದು ಯುವ ಪ್ರತಿಭೆಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಕ್ರಿಕೆಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಹನೂರು ಭಾಗದಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚು ಯುವಕರು ಪಾಲ್ಗೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಐಪಿಎಲ್, ಕೆಪಿಎಲ್ ರಂಗ ಪ್ರವೇಶಿಸಿದ ಮೇಲೆ ಹೆಚ್ಚಿನ ಯುವಕರು ಕ್ರಿಕೆಟ್‌ನಲ್ಲಿ ಆಸಕ್ತಿ ವಹಿಸಿದ್ದಾರೆ.

ಈ ಭಾಗದಲ್ಲೂ ಕ್ರೀಡೆಯಲ್ಲಿ ಯುವ ಪ್ರತಿಭೆಗಳಿದ್ದಾರೆ. ಆದರೆ ಕ್ರಿಕೆಟ್ ಕ್ಲಬ್ ಇರಲಿಲ್ಲ. ಆಯಾ ಗ್ರಾಮಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ ಇದೀಗ ಕ್ರಿಕೆಟ್ ಕ್ಲಬ್ ರಚನೆಯಾಗಿರುವುದು ಉತ್ತಮ ಬೆಳವಣಿಗೆ. ಈ ದಿಸೆಯಲ್ಲಿ ಸಂಘದ ಪದಾಧಿಕಾರಿಗಳು ಯುವ ಪ್ರತಿಭೆಗಳನ್ನು ಒಗ್ಗೂಡಿಸಿ ಸಹಕಾರ ಪಡೆಯುವುದರ ಮೂಲಕ ಕ್ಲಬ್ ಅಭಿವೃದ್ಧಿಯತ್ತ ಗಮನಹರಿಸಬೇಕು. ಜತೆಗೆ ಕ್ರೀಡಾ ಪ್ರತಿಭೆಯನ್ನು ಗುರ್ತಿಸುವ ಕೆಲಸವಾಗಲಿ ಎಂದು ತಿಳಿಸಿದರು. ತಾಪಂ ಮಾಜಿ ಸದಸ್ಯ ಜವಾದ್ ಆಹಮದ್, ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯೆ ಮಮ್ತಾಜ್‌ಬಾನು, ಟೌನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್, ಕ್ಲಬ್ ಅಧ್ಯಕ್ಷ ಅಭಿಲಾಷ್, ಗೌರಾವಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ರಿಜ್ವಾನ್, ಖಜಾಂಚಿ ರಿಯಾಜ್, ಮುಖಂಡರಾದ ಮಾದೇಶ್, ಸಿದ್ದರಾಜು, ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net