ಕ್ರಾಶ್​ ಕೋರ್ಸ್​ ತರಬೇತಿ ಪಡೆಯಲಿ

18Anand1
Published on

ಬೆಳಗಾವಿ: ಎಂಬಿಎ ವಿದ್ಯಾರ್ಥಿಗಳಿಗೆ ಕ್ರಾಶ್​ ಕೋರ್ಸ್​ ತರಬೇತಿ ಸಹಕಾರಿಯಾಗಿದ್ದು, ಸದುಪಯೋಗ ಪಡೆಯಬೇಕು ಎಂದು ಕೆಎಲ್​ಎಸ್​ ಸಂಸ್ಥೆಯ ಐಎಂಇಆರ್​ ನಿರ್ದೇಶಕ ಡಾ.ಆರ್​ೀ ಶೇಖ್​ ಸಲಹೆ ನೀಡಿದರು.

ನಗರದ ಕೆಎಲ್​ಎಸ್​ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಎಜ್ಯುಕೇಷನ್​ ಆ್ಯಂಡ್​ ರಿಸರ್ಚ್​ (ಐಎಂಇಆರ್​) ಆವರಣದಲ್ಲಿನಲ್ಲಿ ಜೂ.17 ರಿಂದ 20ರ ವರೆಗೆ ಆಯೋಜಿಸಿರುವ ಪಿಜಿಸಿಇಟಿ ಕ್ರಾ$್ಯಶ್​ ಕೋರ್ಸ್​ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಂಬಿಎ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ಬಹಳಷ್ಟು ಉಪಯುಕ್ತವಾಗಿದೆ. ತರಬೇತಿಯಲ್ಲಿ ಸಾಮಾನ್ಯ ಾನ, ಇಂಗ್ಲಿಷ್​ ಭಾಷಾ ಪ್ರಾವಿಣ್ಯ, ಪರಿಮಾಣಾತ್ಮಕ ವಿಶ್ಲೇಷಣೆ, ತಾರ್ಕಿಕ ಶಕ್ತಿ ಮತ್ತು ಸಾಮಾನ್ಯ ಬುದ್ಧಿಮತ್ತೆ ಮತ್ತು ಕಂಪ್ಯೂಟರ್​ ಾನದ ಕುರಿತು ತಜ್ಞರು ನೀಡುವ ಮಾಹಿತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಸಮಚಿತ್ತದಿಂದ ಪರೀಕ್ಷೆಗೆ ತಯಾರಿ ನಡೆಸಬೇಕು ಎಂದರು.

ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ.ಅಮಿತ್​ ಕುಲಕರ್ಣಿ, ಕ್ರಾಶ್​ ಕೋರ್ಸ್​ ಸಂಯೋಜಕ ಸುನೀಲ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net