

ಅರಕಲಗೂಡು: ಕೇರಳಾಪುರ ಸಮೀಪದ ನೇರಳೆ ಗ್ರಾಮದ ಕನಕ ಯುವ ಸಂಘಟನೆ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವನ್ನು ಆಚರಿಸಲಾಯಿತು.
ಕೊಡಗು ಜಿಲ್ಲಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬ್ರಿಟಿಷರ ಅಟ್ಟಹಾಸ ಮಿತಿಮೀರಿ ಕಿತ್ತೂರು ಸಂಸ್ಥಾನದ ಜನ ಅಪಾಯದಲ್ಲಿದ್ದ ಹೊತ್ತಿನಲ್ಲಿ ಕೆಚ್ಚೆದೆಯ ದೇಶಪ್ರೇಮಿ ರಾಯಣ್ಣ, ಬೈಲಹೊಂಗಲದ ಕಾರಾಗೃಹದಲ್ಲಿ ಬ್ರಿಟಿಷರಿಂದ ಬಂಧಿಯಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮರ ಬಳಿ ಸಾಧು ವೇಶದಲ್ಲಿ ಹೋಗಿ ಭೇಟಿಯಾಗಿ ಆಕೆಯ ಆಶೀರ್ವಾದ ಪಡೆದು ಆಂಗ್ಲರ ವಿರುದ್ಧ ಯುದ್ಧ ಸಾರಿದ ಅಪ್ಪಟ ದೇಶಪ್ರೇಮಿ. ಇಂದಿನ ಯುವ ಜನಾಂಗ ಸಂಗೊಳ್ಳಿ ರಾಯಣ್ಣ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಕನಕ ಯುವ ಸೇನೆಯ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.
ಹಳ್ಳಿಮೈಸೂರು ಹೋಬಳಿಯ ನೇರಳೆ ಗ್ರಾಮದಲ್ಲಿ ಮಂಗಳವಾರ ಕನಕ ಯುವ ಸೇನೆ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಆಚರಿಸಲಾಯಿತು. ಕೆ.ಎಸ್.ಮೂರ್ತಿ ಮತ್ತು ಗ್ರಾಮಸ್ಥರು ಇದ್ದರು.