ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಫೆ.4ಕ್ಕೆ

oppo_2
oppo_2
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವಿಜಯಪುರ ಜಿ¯್ಲÉಯ ಬಸವನ ಬಾಗೇವಾಡಿಯಲ್ಲಿಲ್ಲಿ ಫೆ.೪ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ, ೧೦೦೮ ಸಾಧುಸಂತರ ಪಾದಪೂಜೆ ಸಮಾರಂಭ ನಡೆಯಲಿದೆ ಎಂದು ಬ್ರಿಗೇಡ್ ರಾಜ್ಯಉಪಾಧ್ಯP್ಷÀ ಭೀಮರಾಯಗೌಡ ಜಂಗಳಿ ತಿಳಿಸಿದರು.

ಸನಾತನ ಹಿಂದೂ ಧರ್ಮದ ರಕ್ಷಣೆ, ಧರ್ಮ ಜಾಗೃತಿ, ದೀನ ದಲಿತರ ಪ್ರಗತಿಗೆ ಶ್ರಮಿಸಿ, ಬಡ ಮಠ ಮಾನ್ಯಗಳಿಗೆ ಶಕ್ತಿ ತುಂಬುವ, ಬಡ ದೇವಸ್ಥಾನಗಳ ಅರ್ಚಕರಿಗೆ ಶಿP್ಷÀಣ ಮತ್ತು ತರಬೇತಿ, ಹಿಂದುಗಳಿಗೆ, ದಲಿತ ಮತ್ತು ಎಲ್ಲ ವರ್ಗದ ಬಡವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಧ್ಯೇಯದೊಂದಿಗೆ ಬ್ರಿಗೇಡ್ ಕಾರ್ಯನಿರ್ವಹಿಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ೧೦೦೮ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಹಾಗೂ ಅದೃಶ್ಯ ಕಾಡಸಿz್ದÉÃಶ್ವರ ಸ್ವಾಮೀಜಿ, ಸಿದ್ಧರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ೧೦೦೮ ಸಾಧು ಸಂತರ ಪಾದ ಪೂಜೆ ನಡೆಯಲಿದೆ. ಧರ್ಮಸಭೆ ನಡೆಯಲಿದ್ದು, ಶ್ರೀ ಸೋಮೇಶ್ವರ ಸ್ವಾಮೀಜಿ, ಶ್ರೀ ಮಾಧುಲಿಂಗ ಮಹಾರಾಜರು, ಅಮರೇಶ್ವರ ಮಹಾಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಕೆಂಚರಾಯ ಪೂಜಾರಿ ಸೇರಿದಂತೆ ನೂರಾರು ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಬ್ರಿಗೇಡ್‌ಗೆ ಸಂಚಾಲಕ ಕೆ.ಎಸ್.ಈಶ್ವರಪ್ಪ, ಅಧ್ಯP್ಷÀ ಬಸವರಾಜ ಬಾಳೆಕಾಯಿ, ಕಾರ್ಯಾಧ್ಯP್ಷÀ ಕೆ.ಈ.ಕಾಂತೇಶ, ಸಂಚಾಲಕರಾದ ಗೂಳಿಹಟ್ಟಿ ಶೇಖರ, ಎಂಜೀರಪ್ಪ, ಮುಕುಡಪ್ಪ ಭಾಗವಹಿಸಲಿದ್ದಾರೆ. ಒಂದು ಲಕ್ಷಕ್ಕಿಂತ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು.

ಜಿಲ್ಲಾಧ್ಯಕ್ಷ ಶಂಕರ ಚವ್ಹಾಣ್, ಪ್ರಮುಖರಾದ ಸಾಯಿಬಣ್ಣ ಯರಗೋಳ, ಡಿ.ಸಿ.ಹೊಸಮನಿ, ಯಲ್ಲಾಲಿಂಗ ಹೊನಗುಂಟಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net