ಕ್ರಾಂತಿಕಾರರ ಕೊಡುಗೆ ಅಪಾರ

nrp panju
ಎನ್.ಆರ್.ಪುರದಲ್ಲಿ ವಿಹಿಂಪದಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಕೆ.ಪಿ.ಸುರೇಶ್‌ಕುಮಾರ್, ಕೋಣಿಕೆರೆ ಸತ್ಯನಾರಾಯಣ, ಎನ್.ಎಂ.ನಾಗೇಶ್, ಬಿ.ಎಸ್.ಆಶೀಶ್‌ಕುಮಾರ್, ಅಶ್ವನ, ವಿ.ನೀಲೇಶ್, ಅರುಣ್‌ಕುಮಾರ್‌ಜೈನ್ ಇತರರಿದ್ದರು.
Published on

ಎನ್.ಆರ್.ಪುರ: ದೇಶಕ್ಕೆ ಸ್ವಾತಂತ್ರೃತಂದುಕೊಡಲು ಅನೇಕ ಕ್ರಾಂತಿಕಾರರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಹೇಳಿದರು.

ಶುಕ್ರವಾರ ರಾತ್ರಿ ವಿಶ್ವ ಹಿಂದು ಪರಿಷತ್ ಎನ್.ಆರ್.ಪುರ ಪ್ರಖಂಡದಿಂದ ಅಖಂಡ ಭಾರತ್ ಸಂಕಲ್ಪ ದಿವಸ್ ಅಂಗವಾಗಿ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿ, 1947ರಂದು ದೇಶಕ್ಕೆ ಸ್ವಾತಂತ್ರೃ ದೊರಕಿದರೂ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಎಂದು ಮೂರು ತುಂಡಾಗಿ ಹೋಯಿತು. ಆ.14ರ ಮಧ್ಯ ರಾತ್ರಿ ಹಿಂದುಗಳ ಹತ್ಯೆ ಮಾಡಲಾಯಿತು. ಇಂತಹ ಕರಾಳ ದಿನವನ್ನು ನೆನೆಯದೆ ಆ.15 ರಂದು ಸಂಭ್ರಮಾಚರಣೆಯಲ್ಲಿ ಮುಳುಗುತ್ತೇವೆ ಎಂದರು.

ಅಂಬೇಡ್ಕರ್ ಅವರ ಮಾತಿಗೆ ಬೆಲೆ ಕೊಡದೆ ದೇಶವನ್ನು ಜಾತ್ಯತೀತ ದೇಶವನ್ನಾಗಿ ಮಾಡಲಾಗಿದೆ. ಪಾಲಕರು ಮಕ್ಕಳಿಗೆ ದೇಶ ವಿಭಜನೆಯ ಕರಾಳತೆ ಬಗ್ಗೆ ತಿಳಿಸಬೇಕು. ಇಂದಿಗೂ ದೇಶದಲ್ಲಿ ಹಿಂದು ಧಾರ್ಮಿಕ ಕೇಂದ್ರಗಳು, ಹಿಂದುಗಳ ಆಚರಣೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರವಾಸಿ ಮಂದಿರದಿಂದ ಪಪಂ ಸರ್ಕಲ್‌ವರೆಗೆ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು, ಮುಖಂಡರು ಪಂಜಿನ ಮೆರವಣಿಗೆ ನಡೆಸಿದರು. ಮುಖಡರಾದ ಅರುಣಕುಮಾರ್, ಕೋಣಿಕೆರೆ ಸತ್ಯನಾರಾಯಣ, ವಿ.ನೀಲೇಶ್, ಎನ್.ಎಂ.ಕಾಂತರಾಜ್, ಅಶ್ವನ, ಹಂಚಿನಮನೆ ರಾಘವೇಂದ್ರ, ಜೆ.ಜಿ.ನಾಗರಾಜ್, ಬಿ.ಎಸ್.ಆಶೀಶ್‌ಕುಮಾರ್, ಎನ್.ಎಂ.ನಾಗೇಶ್, ಎನ್.ಡಿ.ಪ್ರಸಾದ್, ಮುರಳಿ, ಅರುಣ್‌ಕುಮಾರ್ ಜೈನ್, ಎಂ.ಟಿ.ಪ್ರವೀಣ, ಕೆಸುವೆ ಮಂಜುನಾಥ್, ಪ್ರೀತಮ್, ಮದನ್ ಗೌಡ, ಮನೋಜ್ ಗೌಡ, ದರ್ಶನ್, ಪುರುಷೋತ್ತ,ಮ್, ಎಚ್.ಡಿ.ಲೋಕೇಶ್. ದರ್ಶನ್, ಅಭಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net