

ಗುಂಡ್ಲುಪೇಟೆ: ಗ್ರಾಮದಲ್ಲಿ ಕ್ರಷರ್ ಆರಂಭಿಸಿಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ತಾಲೂಕಿನ ಅಗತಗೌಡನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮಾಜಿ ಸಂಸದ ಎ.ಸಿದ್ದರಾಜು ನೇತೃತ್ವದಲ್ಲಿ ಭಾನುವಾರ ಕ್ರಷರ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಸಮಾವೇಶಗೊಂಡ ಗ್ರಾಮದ ಮಹಿಳೆಯರು, ಯುವಕರು ಹಾಗೂ ಮುಖಂಡರು ಕ್ರಷರ್ ಸ್ಥಾಪನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸ್ಥಳದಲ್ಲಿ ಕ್ರಷರ್ ಆರಂಭಿಸಿದರೆ ಇಲ್ಲಿಂದ ಹೊರಬರುವ ಧೂಳಿನಿಂದ ಗ್ರಾಮಸ್ಥರು, ಶಾಲೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅನುಮತಿ ನೀಡಿದರೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.