ಕ್ರಮ ಗಾಂಜಾ ಮಾರಾಟ: ಗಡಿಪಾರು ರೌಡಿಶೀಟರ್ ಬಂಧನ

ಕ್ರಮ ಗಾಂಜಾ ಮಾರಾಟ: ಗಡಿಪಾರು ರೌಡಿಶೀಟರ್ ಬಂಧನ
Published on

ಹಾಸನ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಗಡಿಪಾರು ಆಗಿದ್ದ ನಗರದ ಶ್ರೀ ನಗರ ನಿವಾಸಿ ರಾಹಿಲ್ ಎಂಬಾತ ಮತ್ತೆ ಬಂದು ಅಕ್ರಮ ಗಾಂಜಾ ಮಾರಾಟ ಮಾಡುತ್ತದ್ದ,ವೇಳೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರೀರಾಂ ಶಂಕರ್ ತಿಳಿಸಿದರು.

ಈ ಹಿಂದೆ ಈ ಆರೋಪಿ 9ಕೋಲೆ ಯತ್ನ, 1 ಪೋಕ್ಸೋ, 1ರಾಬರಿ, 9 ಎಸ್.ಡಿ.ಪಿ.ಎಸ್. ಪಕರಣ ಸೇರಿ ಒಟ್ಟು 25ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಈತನನ್ನು ಚುನಾವಣೆ ವೇಳೆ ಚಿಕ್ಕಮಗಳೂರು ಜಿಲ್ಲೆಗೆ 6 ತಿಂಗಳ ಕಾಲ ಗಡಿಪಾರು ಮಾಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಲ್ಲಿಂದ ತಪ್ಪಿಸಿಕೊಂಡು ವಾಪಸ್ ಹಾಸನಕ್ಕೆ ಬಂದು ಮತ್ತೊಂದು 307 ಪ್ರಕರಣದಲ್ಲಿ ಭಾಗಿಯಾಗಿದ್ದ, ಆತನನ್ನು ಬಂಧಿಸಲು ನಮ್ಮ ತಂಡ ಹೋದಾಗ 73 ಗ್ರಾಂ ಗಾಂಜಾ, 2.65 ಗ್ರಾಂ ಮಾದಕ ವಸ್ತು ಹಾಗೂ 39 ನಿಷೇಧಿತ ಮಾದಕ ಮಾತ್ರೆಗಳ ಸೇರಿ ಸುಮಾರು 80 ಸಾವಿರ ಮೌಲ್ಯದ ಅಕ್ರಮ ಮಾದಕ ವಸ್ತುಗಳು ಸಿಕ್ಕಿದ್ದಾವೆ ಎಂದು ಮಾಹಿತಿ ನೀಡಿದರು

ಈ ಆರೋಪಿಯ ಬಂಧನಕ್ಕೆ ಪೊಲೀಸ್ ಇಲಾಖೆ ಇನ್ಸ್‌ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತ್ತು. ನಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net