ಕ್ರಮ ಕಲ್ಲುಗಣಿಗಾರಿಕೆ; ತನಿಖೆಗೆ ಗ್ರಾಮಸ್ಥರ ಆದೇಶ

ಕ್ರಮ ಕಲ್ಲುಗಣಿಗಾರಿಕೆ; ತನಿಖೆಗೆ ಗ್ರಾಮಸ್ಥರ ಆದೇಶ
Published on

ಹಾಸನ: ಹಳ್ಳಿಮೈಸೂರು ಹೋಬಳಿ ಕಲ್ಲೋಡೆ ಬಾರೆ ಕಾವಲು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಖಾಸಗಿ ವ್ಯಕ್ತಿಗಳು ಬಗರ್ ಹುಕ್ಕುಂ ಭೂಮಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ಕಲ್ಲೋಡೆ ಬಾರೆ ಕಾವಲು ಗ್ರಾಮದ ಪುಟ್ಟಸ್ವಾಮಿ ಮನವಿ ಮಾಡಿದರು.

ಸಿ.ಹಿಂದನಹಳ್ಳಿ, ತಾತನಹಳ್ಳಿ ಮತ್ತು ಬಾಚನಹಳ್ಳಿ ಕೊಪ್ಪಲು ಗ್ರಾಮದವರು ಹಳ್ಳಿಮೈಸೂರು ಹೋಬಳಿ ಕಲ್ಲೋಡೆ ಬಾರೆ ಕಾವಲು ಗ್ರಾಮದಲ್ಲಿ ಬಗರ್‌ಹುಕ್ಕುಂ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡುವ ರೈತರಿಗೆ ಬೆದರಿಸುವ ಕೆಲಸವನ್ನು ಮಾಡುದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಲ್ಲು ಗಣಿಗಾರಿಕೆಗೆ ಅಪಾಯಕಾರಿ ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ಸ್ಫೋಟಿಸುತ್ತಿರುವುದರಿಂದ ಮನೆಗಳು ಬಿರುಕು ಬಿಟ್ಟಿವೆ. ಅತಿಯಾದ ಧೂಳಿನಿಂದ ಬೆಳೆ ನಾಶವಾಗುತ್ತಿದೆ. ದನ - ಕರುಗಳು ಮತ್ತು ಕುರಿ- ಮೇಕೆಗಳು ಮೇಯಲು ಸಾಧ್ಯವಾಗುತ್ತಿಲ್ಲ. ರಾತ್ರಿ ಸಮಯದಲ್ಲಿ ಲಾರಿಗಳು, ಟ್ರಾೃಕ್ಟರ್‌ಗಳು ಓಡಾಡುವುದರಿಂದ ತುಂಬಾ ಶಬ್ದವಾಗುತ್ತಿದ್ದು ಮಕ್ಕಳು ಮತ್ತು ಜಾನುವಾರುಗಳು ತುಂಬಾ ಹೆದರುತ್ತಿವೆ ಎಂದು ತಿಳಿಸಿದರು.

ಕಲ್ಲು ಗಣಿಗಾರಿಕೆ ಮಾಡುವವರು ತಮ್ಮ ವಾಸ್ತವ ಜಮೀನಿನೊಂದಿಗೆ ನಮ್ಮಗಳ ಖಾಸಗಿ ಜಮೀನನ್ನು ಆಕ್ರಮಿಸಿಕೊಂಡಿದ್ದು, ನಮ್ಮ ಗಮನಕ್ಕೆ ಬಾರದೇ ಅತಿಕ್ರಮವಾಗಿ ದುರಸ್ತಿ ಮಾಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುತ್ತಾರೆ. ಆದ ಕಾರಣ ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಜನ ಸಾಮನ್ಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ವೀರಭದ್ರಪ್ಪ, ರಂಗೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net