ಕ್ಯೂಟಿಕಾನ್ ಸಮ್ಮೇಳನ

CTD--002
Published on

ಚಿತ್ರದುರ್ಗ: ಐಎಡಿವಿಎಲ್ ಸಹಯೋಗದೊಂದಿಗೆ ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಚರ್ಮರೋಗ ತಜ್ಞರ 15ನೇ ವಾರ್ಷಿಕ ಸಮ್ಮೇಳನ ‘ಕ್ಯೂಟಿಕಾನ್-2024’ ಶನಿವಾರ ಮಧ್ಯಾಹ್ನ 12ಕ್ಕೆ ಆರಂಭವಾಗಲಿದೆ. ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಐಎಡಿವಿಎಲ್ ರಾಷ್ಟ್ರೀಯ ಅಧ್ಯಕ್ಷ ಡಾ. ಮಂಜುನಾಥ ಶೆಣೈ, ರಾಜ್ಯಾಧ್ಯಕ್ಷ ಡಾ. ಮಿಟಕ್ಷರಿ ಎಂ. ಹೂಗಾರ್ ಆಗಮಿಸಲಿದ್ದಾರೆ.

ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್, ಡಾ.ಪಿ.ಎಸ್. ಶಂಕರ್, ಡೀನ್ ಡಾ.ಜಿ.ಪ್ರಶಾಂತ್, ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಎಸ್. ಆನಂದಪ್ಪ, ಸಂಘಟನಾ ಕಾರ‌್ಯದರ್ಶಿ ಡಾ.ಎಂ. ಯೋಗೇಂದ್ರ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net