

ಶಿರಾಳಕೊಪ್ಪ: ಹಿಂದೆ ಕ್ಯಾನ್ಸರ್ ಕಾಯಿಲೆ ಬಂದರೆ ಸಾವು ಗ್ಯಾರಂಟಿ ಎನ್ನುವ ಭಾವನೆ ಜನರಲ್ಲಿತ್ತು. ಈಗ ಕಾಲ ಬದಲಾಗಿದೆ. ಕಾಯಿಲೆ ತಡೆಗಟ್ಟಲು ಹಾಗೂ ರೋಗ ಪತ್ತೆಹಚ್ಚುವ ಆಧುನಿಕ ತಂತ್ರಜ್ಞಾನಗಳು ಜನರ ಜೀವ ರಕ್ಷಿಸುತ್ತಿವೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಸೂರಣಿಗೆ ನಟರಾಜ್ ಹೇಳಿದರು.
ಶಿವಮೊಗ್ಗದ ಖಾಸಗಿ ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್ನಿಂದ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ನಡೆದ ಸ್ತನ ಕ್ಯಾನ್ಸರ್ ಹಾಗೂ ಥೈರಾಯ್ಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯ ಡಾ. ಶಿಶಿರ್ ಸುರಣಗಿ ಮಾತನಾಡಿ, ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಥೈರಾಯ್ಡ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಡಾ. ಎಂ.ಶ್ರೀಯಾಂಶ ಅವರು ಸ್ತನ ಕ್ಯಾನ್ಸರ್ ಹಾಗೂ ಥೈರಾಯ್ಡ್ ಸಮಸ್ಯೆಗಳ ಲಕ್ಷಣಗಳು, ತಡೆಯುವ ಮಾರ್ಗಗಳು, ತಕ್ಷಣ ಚಿಕಿತ್ಸೆ ಪಡೆಯುವ ಅಗತ್ಯತೆ ಬಗ್ಗೆ ಉಪನ್ಯಾಸ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಇಸ್ಲೂರು, ಡಾ. ಮುರುಘರಾಜ್, ಡಾ. ಕೌಶಿಕ್ ಇತರರಿದ್ದರು.