ಕ್ಯಾನ್ಸರ್ ರೋಗಿ ಬಾಳಿಗೆ ಡಾ.ಜೋಶಿ ಆಶಾಕಿರಣ

9Kagavad1
Published on

ಕಾಗವಾಡ: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಬಾಳಿಗೆ ಆಶಾಕಿರಣವಾಗಿರುವ ಡಾ.ರವೀಂದ್ರ ಜೋಶಿ ಅವರ ಕಾರ್ಯ ಶ್ಲಾಘನೀಯ. ಅವರ ಉತ್ತಮ ಸೇವೆಯಿಂದ ಅನೇಕ ಕಾನ್ಸರ್ ರೋಗಿಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದು ಸಾಂಗಲಿ ಸಂಸದ ವಿಶಾಲದಾದಾ ಪಾಟೀಲ ಹೇಳಿದರು.

ಮಿರಜ ಪಟ್ಟಣದ ಡಾ.ಜೋಶಿ ಅವರ ಕ್ಯಾನ್ಸರ್ ಸೆಂಟರ್ ಮತ್ತು ಹಿಮಾಟಾಲಜಿ ಕ್ಲಿನಿಕ್ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, 15 ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ತೆರೆದ ಡಾ. ಜೋಶಿ ಅವರು ಗುಣಮಟ್ಟದ ಚಿಕಿತ್ಸೆ ನೀಡಿ, ಅನೇಕ ಕ್ಯಾನ್ಸರ್ ರೋಗ ನಿವಾರಣೆ ಮಾಡಿದ್ದಾರೆ ಎಂದರು.

ಡಾ. ರವೀಂದ್ರ ಜೋಶಿ 15 ವರ್ಷಗಳ ವೈದ್ಯಕೀಯ ಸೇವೆ ಜತೆಗೆ ಭವಿಷ್ಯದ ಆಧುನಿಕ ಪದ್ಧತಿ ಚಿಕಿತ್ಸೆ ಕುರಿತು ಬೆಳಕು ಚೆಲ್ಲಿದರು. ಡಾ.ಮಿಲಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಆರೋಗ್ಯಂ ಧನ್ ಸಂಪದಾ’ ವಿಷಯ ಕುರಿತು ನಿತೀನ ಬಾನುಗಡೆಪಾಟೀಲ ಉಪನ್ಯಾಸ ನೀಡಿದರು.

ಡಾ. ಜೋಶಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕೆಲವರು ಅನಿಸಿಕೆ ಹಂಚಿಕೊಂಡರು. ಬಿಜೆಪಿ ಮುಖಂಡರಾದ ಸುರೇಶ ಅವಟಿ, ಡಾ. ರವೀಂದ್ರ ಜೋಶಿ, ಡಾ. ಮಿಲಿಂದ ಜೋಶಿ, ಡಾ.ಎಸ್.ವಿ. ವಿಜಾಪುರ, ಚಂದ್ರಕಾಂತ ಕಿತ್ತೂರೆ, ಡಾ. ಸೋಮಶೇಖರ ಪಾಟೀಲ, ಡಾ. ಶಿಶಿರ ಗೋಸಾವಿ, ಡಾ. ದಯಾನಂದ ನಾಯಕ, ಡಾ. ಬಿ.ಟಿ. ಕುರಣೆ, ಡಾ. ಸಂಜೀವ ಕುಲಕರ್ಣಿ, ಡಾ. ದಿನೇಶ ಬಡಾಖ, ಡಾ. ಪ್ರಿಯದರ್ಶನ ಚಿತಳೆ, ಡಾ ವಿವೇಕ ಕುಲಕರ್ಣಿ, ಡಾ. ಶ್ರೀನಿಕೇತನ ಕಾಳೆ, ಡಾ. ಅಮಿತ ಗಾಡವೆ, ಡಾ. ಭಾಸ್ಕರ ಪ್ರಾಣಿ, ಡಾ. ವಿಕ್ರಾಂತ ಮಗದುಮ್, ಡಾ. ಚಂದ್ರಪಟ್ಟಣ, ಡಾ. ಶರದ ದೇಸಾಯಿ, ಡಾ. ಉದಯ ಫಟಖ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net