ಕ್ಯಾನ್ಸರ್ ಕುರಿತು ಅರಿವು ಮುಖ್ಯ : ಶಾಸಕ ಎಸ್.ಎ. ರಾಮದಾಸ್

Published on

ಮೈಸೂರು: ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಕೆ.ಆರ್.ಕ್ಷೇತ್ರ ವ್ಯಾಪ್ತಿಯ ನಂಜುಮಳಿಗೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿಯ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ಅರಿವು ಶಿಬಿರ, ಸರ್ಕಾರಿ ಸವಲತ್ತುಗಳ ಅದಾಲತ್, ಆಧಾರ್‌ಕಾರ್ಡ್ ನವೀಕರಣ, ವಾರ್ಡ್ ಸಮಸ್ಯೆ ಮತ್ತು ಪರಿಹಾರ, ಮಧುಮೇಹ ತಪಾಸಣಾ ಉಚಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಯಾನ್ಸರ್ ಕುರಿತು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ನಾವು ಕುಡಿಯುವ ನೀರು, ಸೇವಿಸುವ ಆಹಾರವೇ ಕ್ಯಾನ್ಸರ್‌ಗೆ ಮೂಲ ಎಂಬುದು ಎಲ್ಲರಿಗೂ ತಿಳಿದಿರಬೇಕು. ಈ ಕಾರಣಕ್ಕಾಗಿ ಉತ್ತಮ ನೀರು ಹಾಗೂ ಆಹಾರ ಸೇವನೆಯ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಜನರಿಗೆ ಶುದ್ಧವಾದ ಕುಡಿಯುವ ನೀರು ದೊರೆಯಬೇಕು ಎಂಬ ಉದ್ದೇಶದಿಂದ ಕೆ.ಆರ್. ಕ್ಷೇತ್ರವನ್ನು ಕೊಳವೆಬಾವಿ ಮುಕ್ತ ಕ್ಷೇತ್ರವನ್ನಾಗಿಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಕ್ಷೇತ್ರದ ಎಲ್ಲ ಭಾಗಗಳಿಗೂ ಕಾವೇರಿ ಹಾಗೂ ಕಬಿನಿ ನೀರು ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net