ಕ್ಯಾತಗಾನಕೆರೆಯಲ್ಲಿ ಚರ್ಚ್​ ಉದ್ಘಾಟನೆಗೆ ಕ್ಯಾತೆ

0
Published on

ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಕ್ಯಾತಗಾನಕೆರೆಯಲ್ಲಿ ನಿರ್ಮಿಸಿರುವ ಐಪಿಎಸ್​ ಚಿಯೋನ್​ ಪ್ರಾರ್ಥನಾ ಮಂದಿರ ಉದ್ಘಾಟನೆಗೆ "ಕ್ಯಾತೆ' ತೆಗೆಯಲಾಗಿದೆ. ಚರ್ಚ್​ ಪಾದ್ರಿ ವಿರುದ್ಧ ಅನೈತಿಕ ಆರೋಪವರಿಸಿ ಗ್ರಾಮಸ್ಥರು ಚರ್ಚ್​ ಉದ್ಘಾಟನೆ ಮಾಡದಂತೆ ತೀವ್ರ ವಿರೋಧ ವ್ಯಕ್ತಪಡಿಸಿರುವುದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸೋಮವಾರ ಚರ್ಚ್​ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ, ಗ್ರಾಮಸ್ಥರು ಏಕಾಏಕಿ ಚರ್ಚ್​ ಉದ್ಘಾಟನೆಗೆ ಅವಕಾಶ ಕೊಡದೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪಾದ್ರಿಗಳು ಸಂರ್ಷಕ್ಕೆ ಅವಕಾಶ ಮಾಡಿಕೊಡದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಈ ವೇಳೆ ಗ್ರಾಮಸ್ಥರು ಸ್ಥಳಿಯ ಪಾದ್ರಿ ಸುರೇಶ್​ ನಡವಳಿಕೆ ಬಗ್ಗೆ ಆರೋಪಗಳನ್ನು ಮಾಡಿದ್ದ ಹಿನ್ನೆಲೆಯಲ್ಲಿ ಚರ್ಚ್​ ಉದ್ಘಾಟನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಎಎಸ್ಪಿ ದೌಡು: ಸುದ್ದಿ ತಿಳಿದು ಎಎಸ್ಪಿ ಬಿ.ಎಸ್​.ಅಬ್ದುಲ್​ ಖಾದರ್​, ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಮಂಜುನಾಥ್​, ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್​, ನಗರ ವೃತ್ತ ನಿರೀಕ್ಷಕ ಸುರೇಶ್​ ಸೇರಿದಂತೆ ಪೊಲೀಸ್​ ಸಿಬ್ಬಂದಿ ಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಗ್ರಾಮಸ್ಥರಿಂದ ಮಾಹಿತಿ ಪಡೆದು ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಊಹಾಪೋಹಗಳಿಗು ಕಿವಿಗೊಡದೆ ಶಾಂತಿಯಿಂದ ವರ್ತಿಸುವಂತೆ ಗ್ರಾಮಸ್ಥರಿಗೆ ತಿಳಿಹೇಳಿದ್ದಾರೆ. ಗ್ರಾಮಸ್ಥರಾಗಲಿ, ಚರ್ಚ್​ ಪಾದ್ರಿಯಾಗಲಿ ಯಾವುದೇ ದೂರು ನೀಡದ ಹಿನ್ನೆಲೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಸೌಹಾರ್ದಯುತವಾಗಿರಲು ಸೂಚನೆ ನೀಡಿದ್ದಾರೆ.

ಟ್ರಸ್ಟ್​ ಹೆಸರಲ್ಲಿ ನಿವೇಶನ ನೋಂದಣಿ!: ಸುರೇಶ್​ ಎಂಬ ಪಾದ್ರಿಯು ಕಳೆದ ಮೂರು ವರ್ಷಗಳಿಂದ ಕ್ಯಾತನಗೆರೆ ಗ್ರಾಮದಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು ಎನ್ನಲಾಗಿದೆ. ಮನೆ ನಿರ್ಮಾಣ ಮಾಡುವುದಾಗಿ ಖಾಸಗಿ ಜಮೀನು ಖರೀದಿಸಿ ಗ್ರಾಪಂನಲ್ಲಿ ಟ್ರಸ್ಟ್​ ಹೆಸರಲ್ಲಿ ನೋಂದಾಯಿಸಿಕೊಂಡಿದ್ದರು. ಈ ವೇಳೆ ಗ್ರಾಮಸ್ಥರು ಚರ್ಚ್​ ನಿರ್ಮಿಸದಂತೆ ಎಚ್ಚರ ನೀಡಿದ್ದರು. ಚರ್ಚ್​ ನಿರ್ಮಾನದ ಬಗ್ಗೆ ಅಧಿಕಾರಿಗಳಿಗಾಗಲಿ, ಗ್ರಾಮಸ್ಥರಿಗಾಗಲಿ ಯಾವುದೇ ಮಾಹಿತಿ ನೀಡದೆ ಉದ್ಘಾಟನೆಗೆ ಎರಡು ದಿನಗಳಿರುವಂತೆ ಪ್ರಾರ್ಥನಾ ಮಂದಿರದ ಹೆಸರು ಬರೆಸಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಜಾತಿ ಜಾತಿ ಗಳ ನಡುವೆ ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ನಿಮ್ಮ ಚರ್ಚ್​ ಅವಶ್ಯಕತೆಯಿಲ್ಲ ಎಂದಿದ್ದಲ್ಲದೆ, ಸ್ಥಳಿಯ ಪಾದ್ರಿ ಸುರೇಶ್​ ವಿರುದ್ಧ ಅನೈತಿಕ ಸಂಬಂಧ ಆರೋಪ ವರಿಸಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net