ಕ್ಯಾಂಪಸ್ ಕ್ರಾಂತಿ 24ರಂದು ತೆರೆಗೆ

74b1d468-2eb6-4471-a974-5a2540977d91
Published on

ಮೈಸೂರು: ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆಯನ್ನು ಆಧರಿಸಿದ ‘ಕ್ಯಾಂಪಸ್ ಕ್ರಾಂತಿ’ ಚಲನಚಿತ್ರ ಫೆ.24ರಂದು ತೆರೆ ಕಾಣಲಿದೆ.


ನಾಯಕ ನಟನಾಗಿ ಆರ್ಯ, ನಾಯಕಿಯಾಗಿ ಇಶಾನಾ ಅಭಿನಯಿಸಿದ್ದಾರೆ. ಇನ್ನಿತರ ಪ್ರಮುಖ ನಟ, ನಟಿಯರೂ ತಾರಾಗಣದಲ್ಲಿದ್ದು, ಕಾಲೇಜು ಹುಡುಗರೆಲ್ಲ ಸೇರಿ ಮಾಡುವ ಹೊಸ ಕ್ರಾಂತಿ ಎಳೆಯ ಸುತ್ತ ಚಲನಚಿತ್ರ ಓಡುತ್ತದೆ. ಇದರಲ್ಲಿ ಹಾಸ್ಯ, ಉತ್ತಮ ಹಾಡು, ಹೊಡೆದಾಟವೂ ಇದೆ ಎಂದು ಚಿತ್ರದ ನಿರ್ದೇಶಕ ಸಂತೋಷ್‌ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವಿ.ಮನೋಹರ್ ಅವರು ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿ.ಕೆ.ಎಚ್.ದಾಸ್ ಅವರ ಛಾಯಾಗ್ರಹಣವಿದೆ. 5 ಸಾಹಸ ದೃಶ್ಯಗಳಿವೆ. ಕುಂಗ್ ಫು ಚಂದ್ರು ಸಾಹಸ ಸಂಯೋಜನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.


ಚಿತ್ರ ತಂಡದ ಆರ್ಯ, ಇಶಾನಾ, ರಣವೀರ್, ಚೇತನ್ ಮೊದಲಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net