

ವಿಜಯವಾಣಿ ವಿಶೇಷ ಶಿರಸಿ
ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದಿದೆ. ಮಂಜೂರಾಗಿ 20 ತಿಂಗಳು ಕಳೆದರೂ ತಳಪಾಯಕ್ಕಷ್ಟೇ ಸೀಮಿತವಾಗಿದೆ. ಕ್ಯಾಂಟೀನ್ ಜಾಗ ಈಗ ರ್ಪಾಂಗ್ ಸ್ಥಳವಾಗಿ ಮಾರ್ಪಟ್ಟಿದೆ.
2018ರ ಅಕ್ಟೋಬರ್ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಗರದ ಹೃದಯ ಭಾಗವಾದ ಹಳೇ ಬಸ್ ನಿಲ್ದಾಣ ಸಮೀಪದ ಸರ್ವೆ ನಂಬರ್ 1007ರಲ್ಲಿ ಇಂದಿರಾ ಕ್ಯಾಂಟೀನ್ಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ರಾಜ್ಯದ ಬಹುತೇಕ ಕಡೆ ಕ್ಯಾಂಟೀನ್ ನಿರ್ವಣವಾಗಿ ಗ್ರಾಹಕರಿಗೆ ಸೇವೆ ಲಭಿಸುತ್ತಿದ್ದರೆ, ಶಿರಸಿಯಲ್ಲಿ ಮಾತ್ರ ತಳಪಾಯ ಬಿಟ್ಟು ಮೇಲೆದ್ದಿಲ್ಲ. ತಳಪಾಯ ಕೆಲಸ ಮುಗಿದು, ಅಲ್ಲಿಗೇ ಸ್ಥಗಿತವಾಗಿದೆ. ಈ ಜಾಗ ಈಗ ರ್ಪಾಂಗ್ ಸ್ಥಳವಾಗಿ ಮಾರ್ಪಟ್ಟಿದೆ.
ಕೆಫ್ (ಕೆಇಎಫ್) ಇನ್ಫ್ರಾಸ್ಟ್ರಕ್ಚರ್ಗೆ ಇಂದಿರಾ ಕ್ಯಾಂಟೀನ್ ನಿರ್ವಣದ ಗುತ್ತಿಗೆ ನೀಡಲಾಗಿದೆ. 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ, ತಳಪಾಯ ಹಾಕಿ 20 ತಿಂಗಳು ಕಳೆದರೂ ಕಾಮಗಾರಿ ಮುಂದೆ ಸಾಗಿಲ್ಲ. ಮಾಸ್ಟರ್ ಕಿಚನ್, ಕ್ಯಾಂಟೀನ್ ಹಾಲ್, ಶೌಚಗೃಹ, ಗ್ರಾಹಕರಿಗೆ ನಿಂತುಕೊಳ್ಳಲು ವ್ಯವಸ್ಥೆ ಸೇರಿ 2 ತಿಂಗಳೊಳಗೆ ಸುಸಜ್ಜಿತ ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಣಗೊಳ್ಳಬೇಕಿತ್ತಾದರೂ ನೆಲದಿಂದ ಮೇಲೆ ಏಳುತ್ತಿಲ್ಲ.
ಬಡವರಿಗೆ ಕಡಿಮೆ ದರದಲ್ಲಿ ಊಟ-ಉಪಾಹಾರ ನೀಡಲೆಂದು ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಕಾಮಗಾರಿಯು ಸಂಬಂಧಪಟ್ಟ ಇಲಾಖೆ, ಗುತ್ತಿಗೆ ಕಂಪನಿಯ ನಿರ್ಲಕ್ಷದಿಂದ ಆರಂಭಿಕ ಹಂತದಲ್ಲೇ ಸ್ಥಗಿತಗೊಂಡಿದೆ. ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದರೂ ಸಂಬಂಧಪಟ್ಟ ಶಾಸಕರಾಗಲಿ, ನಗರಾಡಳಿತವಾಗಲಿ ಗಮನಹರಿಸದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.
ಕಾರಣವೇನು? : ಈ ಹಿಂದೆ ಇಂದಿರಾ ಕ್ಯಾಂಟೀನ್ ನಿರ್ವಣದ ಕಾಮಗಾರಿ ಚಾಲ್ತಿಯಲ್ಲಿರುವಾಗ ಈ ಜಾಗದ ಕುರಿತು ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರುವ ಹಂತ ತಲುಪಿತ್ತು. ಹೀಗಾಗಿ, ಗುತ್ತಿಗೆ ಪಡೆದವರು ಕಾಮಗಾರಿಯಿಂದ ಹಿಂದೆ ಸರಿದಿದ್ದು, ಗೊಂದಲ ಬಗೆಹರಿಯುವವರೆಗೂ ಕಾಮಗಾರಿ ನಡೆಯುವುದು ಅನುಮಾನವಾಗಿದೆ.
ಜಿಲ್ಲೆಯ ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನಲ್ಲಿ ಕ್ಯಾಂಟೀನ್ ನಿರ್ವಣಗೊಂಡು ಸಚಿವ ಶಿವರಾಮ ಹೆಬ್ಬಾರ ಉದ್ಘಾಟನೆಯನ್ನು ಸಹ ಮಾಡಿದ್ದಾರೆ. ಆದರೆ, ತೀರಾ ಅಗತ್ಯ ಇರುವ ಶಿರಸಿಯಲ್ಲಿ ಮಾತ್ರ ಕಾಮಗಾರಿಯು ತಳಪಾಯಕ್ಕಷ್ಟೇ ಸೀಮಿತವಾಗಿದೆ. ಗುತ್ತಿಗೆ ಕಂಪನಿಯ ನಿರ್ಲಕ್ಷ ಅಥವಾ ಆಡಳಿತದವರ ಅಸಡ್ಡೆಯಿಂದ ಕ್ಯಾಂಟೀನ್ ಕಾಮಗಾರಿ ವಿಳಂಬವಾಗಿದೆ. | ಪಿ.ಎಸ್. ಹೆಗಡೆ, ಸಾಮಾಜಿಕ ಕಾರ್ಯಕರ್ತ
ಈಗಾಗಲೇ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡು ಜನತೆಗೆ ಸೇವೆ ನೀಡಬೇಕಿತ್ತು. ಆದರೆ, ಈವರೆಗೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ. ನಗರಸಭೆಯ ಗೋದಾಮಿನಲ್ಲಿ ಇಂದಿರಾ ಕ್ಯಾಂಟೀನ್ನ ಅಡುಗೆಗೆ ಬಳಸುವ ಸಲಕರಣೆಗಳನ್ನು ದಾಸ್ತಾನು ಮಾಡಲಾಗಿದೆ. ಹೀಗಾಗಿ, ನಗರಸಭೆ ವತಿಯಿಂದ ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. | ರಮೇಶ ನಾಯಕ, ಪೌರಾಯುಕ್ತ