ಕ್ಯಾಂಟರ್​ ಡಿಕ್ಕಿಯಾಗಿ ಒರ್ವ ಸಾವು

Published on

ಹುಲಿಯೂರುದುರ್ಗ:- ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಕಂಪ್ಲಾಪುರ ಗೇಟ್​ ಬಳಿ ಶುಕ್ರವಾರ ಸಂಜೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕ್ಯಾಂಟರ್​ ಡಿಕ್ಕಿಯಾಗಿ ಕಂಪ್ಲಪುರ ಗ್ರಾಮ ನಂಜಪ್ಪ (65) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ ನಂಜಪ್ಪ ಗ್ರಾಮದಲ್ಲಿ ಹಾವು ಕಡಿದವರಿಗೆ ನಾಟಿ ಔಷಧ ಕೊಡುತ್ತಿದ್ದರು ಎಂದು ತಿಳಿದು ಬಂದಿದೆ. ಹುಲಿಯೂರುದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net